ರಾಜ್ಯದ ಮಹಿಳೆಯರು ಗೃಹಲಕ್ಷ್ಮೀಯರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಮಹಿಳೆಯರನ್ನು ಗೃಹಲಕ್ಷ್ಮೀಯರನ್ನಾಗಿಸಿದೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಲೈಂಗಿಕ ಅಲ್ಪಸಂಖ್ಯಾತರು ಗೃಹ ಲಕ್ಷ್ಮೀ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ, ಗೃಹ ಲಕ್ಷ್ಮೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಲಿದ್ದು, 30 ಸಾವಿರ ಕೋಟಿ ವೆಚ್ಚದಲ್ಲಿ ಗೃಹಲಕ್ಷ್ಮೀ ಯೋಜನೆ ಪ್ರಾರಂಭಿಸಲಾಗುವುದು ಎಂದರು.

* ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿನ ರೇಷ್ಮೆ ಮಾರುಕಟ್ಟೆಯನ್ನು ಹೈಟೆಕ್ ಗೊಳಿಸಲು 75 ಕೋಟಿ ಅನುದಾನ ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

* ಚರ್ಮಗಂಟು, ಪಶು ಆಹಾರದ ಬೆಲೆ ಏರಿಕೆಯಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ, ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದು, ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಜಾನುವಾರುಗಳಿಗೆ 53 ಕೋಟಿ ಪರಿಹಾರವನ್ನು ನೀಡಲಾಗಿದ್ದು, ಬಾಕಿ ಉಳಿದಿರುವ 12 ಕೋಟಿ ಅನುದಾನವನ್ನು ನೀಡಲಾಗುವುದು ಎಂದರು.

* ರಾಜ್ಯದ ರೈತರ ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ ಹೆಚ್ಚಳ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 25 ಸಾವಿರ ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ.

* 23252 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆ ಪೂರ್ಣಗೊಳಿಸಲು ಆದ್ಯತೆ, ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಪ್ರಾರಂಭಿಸಲು ಕ್ರಮ, ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಅನುಮೋದನೆಗೊಂಡಿಲ್ಲ, ಘೋಷಣೆಯಾದ ಅನುದಾನವೂ ಬಿಡುಗಡೆಗೊಂಡಿಲ್ಲ ಎಂದರು.

* ಎಸ್ಸಿಪಿ/ಟಿಎಸ್ಪಿ ಯೋಜನೆಯ ಸೆಕ್ಷನ್ ಡಿ ಕೈಬಿಡಲಾಗುವುದು, ಕ್ರೈಸ್ ಶಾಲೆಗಳನ್ನು ಆಧುನೀಕರಣಗೊಳಿಸಲಾಗುವುದು,  ಪರಿಶಿಷ್ಟ ಸಮುದಾಯಕ್ಕೆ ಭರ್ಜರಿ ಅನುದಾನ ನೀಡಿದ ಸಿದ್ದರಾಮಯ್ಯ.

* ಡಾ.ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ಗೆ 2 ಕೋಟಿ, * ಟ್ಯಾಕ್ಸಿ ಖರೀದಿ ಯೋಜನೆಗೆ 4 ಲಕ್ಷ ಸಹಾಯ

* ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕತ ತರಬೇತಿ

* ಚರ್ಮ ಆಧಾರಿತ ಉದ್ಯಮ ಉತ್ತೇಜನಕ್ಕೆ ತರಬೇತಿ

* ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಸಬಲೀಕರಣ, ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ.

ಸಾಮಾಜಿಕ ನ್ಯಾಯ ರಾಜಕೀಯ ಅಸ್ತ್ರವಲ್ಲ

* ನಾಲ್ಕು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಡೆಗಣನೆ, ವಿದ್ಯಾರ್ಥಿಗಳಿಗಾಗಿ ನೀಡಿದ್ದ ಅರಿವು, ವಿದ್ಯಾಸಿರಿ ಯೋಜನೆ ಪುನಾರಂಭಗೊಳಿಸಲಾಗುವುದು.

* ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ದೊರೆಯಲಿದೆ.

* ವಿದೇಶಿ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿದರದಲ್ಲಿ 20 ಲಕ್ಷ ಸಹಾಯಧನ.

* ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶುಚಿ ಕಿಟ್ ವಿತರಣೆ, ಹಾಸ್ಟೆಲ್ ಬಲವರ್ಧನೆಗೆ ಕ್ರಮ

* ಸ್ವಯಂ ಉದ್ಯೋಗಕ್ಕೆ ಶೇ.50ರಷ್ಟು ಸಹಾಯಧನ ಘೋಷಣೆ

* ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ 2 ಕೋಟಿ ಅನುದಾನ

* ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 62 ಕೋಟಿ ವಿದ್ಯಾರ್ಥಿ ವೇತನ, ವಸತಿ ಶಾಲೆಗಳಿಗೆ 30 ಕೋಟಿ ಅನುದಾನ, ಮೊರಾರ್ಜಿ ದೇಸಾಯಿ ಶಾಲೆಗಳ ದಾಖಲಾತಿ ದ್ವಿಗುಣಗೊಳಿಸಲಾಗುವುದು.

* ಮೌಲಾನ ಆಜಾದ್ ಶಾಲೆಗಳ ಗುಣಮಟ್ಟ ಒದಗಿಸಲಾಗುವುದು.

* ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೇ.2 ಬಡ್ಡಿದರದಲ್ಲಿ ಒಂದು ಲಕ್ಷ ಸಾಲ ಸೌಲಭ್ಯ

* ಕನ್ನಡ ಮತ್ತು ಆಂಗ್ಲ ಭಾಷಾ ಪ್ರಯೋಗಾಲಯ ಸ್ಥಾಪನೆಗೆ 5 ಕೋಟಿ ಅನುದಾನ

* ಐಎಎಸ್/ಕೆಎ ಎಸ್ ತರಬೇತಿ

* ವಿದೇಶಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಕ್ಕೆ 20 ಲಕ್ಷ ಸಹಾಯಧನ

* ಶಾದಿ ಮಹಲ್ ಮತ್ತು ಸಮುದಾಯ ಭವನವನ್ನು 54 ಕೋಟಿ ವೆಚ್ಚದಲ್ಲಿ ಪೂರ್ಣ ಗೊಳಿಸಲಾಗುವುದು.

* ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ 100 ಕೋಟಿ ಅನುದಾನ

 

Verified by MonsterInsights