ತುಮಕೂರು: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಿಂದ ಮಹಿಳೆ ಜಿಗಿದ ಪರಿಣಾಮ ಎರಡು ಕಾಲಿಗೆ ತೀವ್ರ ಪೆಟ್ಟಾಗಿರುವ ಘಟನೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರಿನಿಂದ ದಾವಣಗೆರೆಗೆ ಕುಟುಂಬಸ್ಥರೊಂದಿಗೆ ಪ್ರಯಾಣಿಸುತ್ತಿದ್ದ ಚಂದ್ರಮ್ಮ (40), ಮಕ್ಕಳಿಗೆ ತಿಂಡಿ-ತಿನಿಸು ಕೊಳ್ಳಲು ತುಮಕೂರು ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ, ಈ ವೇಳೆ ರೈಲು ಮುಂದಕ್ಕೆ ಚಲಿಸುತ್ತಿರುವುದನ್ನು ಗಮನಿಸಿ ಆತುರವಾಗಿ ರೈಲನ್ನು ಹತ್ತಿದ್ದಾಳೆ.
ರೈಲು ಹತ್ತಿದ ಬಳಿಕ ಫ್ಲಾಟ್ ಫಾರಂ ಮೇಲೆ ಇದ್ದ ಬೇರೆಯವರು ಮಗುವನ್ನು ನನ್ನ ಮೊಮ್ಮಕ್ಕಳು ಎಂದು ಭಾವಿಸಿ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಫ್ಲಾಟ್ ಫಾರಂ ಮೇಲೆ ಜಿಗಿದಿದ್ದಾಳೆ ಇದರಿಂದಾಗಿ ಎರಡು ಕಾಲಿಗೂ ಕಟ್ಟಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಆಕೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ತುಮಕೂರು ರೈಲ್ವೆ ಪೊಲೀಸ್ ಇನ್ ಸ್ಪೆಕ್ಟರ್ ಸುದರ್ಶನ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.