ತುಮಕೂರು: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಿಂದ ಮಹಿಳೆ ಜಿಗಿದ ಮಹಿಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಬೆಂಗಳೂರಿನಿಂದ ದಾವಣಗೆರೆಗೆ ಕುಟುಂಬಸ್ಥರೊಂದಿಗೆ ನಿನ್ನೆ ಪ್ರಯಾಣಿಸುತ್ತಿದ್ದ ಚಂದ್ರಮ್ಮ (40), ಮಕ್ಕಳಿಗೆ ತಿಂಡಿ-ತಿನಿಸು ಕೊಳ್ಳಲು ತುಮಕೂರು ರೈಲ್ವೆ ನಿಲ್ದಾಣದಲ್ಲಿ ಇಳಿದಾಗ ಘಟನೆ ನಡೆದಿತ್ತು.
ಇದನ್ನು ಓದಿ:ತುಮಕೂರಿನಲ್ಲಿ ಶತಾಬ್ಧಿ ರೈಲಿನಿಂದ ಜಿಗಿದ ಮಹಿಳೆ
ರೈಲ್ವೆ ಹಳಿಗೆ ಸಿಲುಕಿ ಕಾಲು ತುಂಡಾಗಿದ್ದರಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಚಂದ್ರಮ್ಮ ಸಾವನ್ನಪ್ಪಿದ್ದಾರೆ.