ತುಮಕೂರು: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಅವ್ರು ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಯಾರ್ರೀ ಅವ್ನು ಮುರುಳೀಧರ ಹಾಲಪ್ಪ ಎಂದು ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಚುನಾವಣೆ ಮಾಡಿದ್ದೇನೆ, ಒಂದು ವೋಟು ಕಾಂಗ್ರೆಸ್ ಗೆ ಹಾಕ್ಸಿದ್ದೀನಿ ಅನ್ನೋದನ್ನ ತೋರಿಸಲಿ ನೋಡೋಣ, ಮಾಧ್ಯಮಗಳೇ ಅಭ್ಯರ್ಥಿ ಅಂತ ಮಾಡಿದ್ದಾರೆ ಅಷ್ಟೇ ಎಂದರು.
ಮಾಜಿ ಸಚಿವ ಸೋಮಣ್ಣ ನನ್ನ ಸ್ನೇಹಿತ ಆತ ಚುನಾವಣೆ ಸ್ಪರ್ಧಿಸಿದ್ರೆ ಸ್ಪರ್ಧಿಸಲಿ ರಾಜಕಾರಣ ಬೇರೆ ಸ್ನೇಹಸಂಬಂಧ ಬೇರೆ, ನಾನು, ಹಾಲಿ ಸಂಸದ ಜಿ.ಎಸ್.ಬಸವರಾಜು ವಾರಕ್ಕೆ ನಾಲ್ಕು ಬಾರಿ ಭೇಟಿ ಮಾಡ್ತೀವಿ ಸ್ನೇಹನೇ ಬೇರೆ, ರಾಜಕಾರಣನೇ ಬೇರೆ ಎಂದರು.
ಮಾ.10ರೊಳಗೆ ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದೆ, ಮುದ್ದಹನುಮೇಗೌಡ ಅವರು ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ, ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದರು.