ಮತಾಂತರಕ್ಕೆ ಯುವತಿಯರ ಬಳಕೆ: ಮೂವರ ಬಂಧನ

ಡೆಸ್ಕ್
1 Min Read

ತುಮಕೂರು: ಹಿಂದೂ ಯುವಕರನ್ನು ಮತಾಂತರ ಮಾಡಲು ಯುವತಿಯರನ್ನು ಬಳಸುತ್ತಿದ್ದ ಜಾಲವನ್ನು ವಶಕ್ಕೆ ಪಡೆಯುವಲ್ಲಿ ಜಯನಗರ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ನಗರದ ಮರಳೂರು ದಿಣ್ಣೆಯಲ್ಲಿನ ಹಿಂದೂ ಯುವಕರನ್ನು ಮತಾಂತರಗೊಳಿಸಲು ಯತ್ನಿಸಿದ ಜೆಸ್ಸಿ, ಸಾರಾ ಹಾಗೂ ಚೇತನ್ ಅವರನ್ನು ವಶಕ್ಕೆ ಪಡೆದಿರುವ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮರಳೂರ ದಿಣ್ಣೆಯ ರವಿ ಎಂಬ ಯುವಕನ ಮೊಬೈಲ್ ನಂಬರ್ ಪಡೆದಿದ್ದ ಜೆಸ್ಸಿ ಮತ್ತು ಸಾರಾ ಆತನೊಂದಿಗೆ ಸ್ನೇಹ ಸಂಪಾದಿಸಿದ್ದರು, ನಂತರ ನಿಮ್ಮೊಂದಿಗೆ ಮಾತನಾಡಬೇಕು ಎಂದು ಭಾನುವಾರ ರಾತ್ರಿ ಮರಳೂರು ದಿಣ್ಣೆಯಲ್ಲಿರುವ ರವಿ ಅವರ ಮನೆಗೆ ತೆರಳಿದ್ದ ಜೆಸ್ಸಿ, ಸಾರಾ ಹಾಗೂ ಚೇತನ್ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ.

ಜಗತ್ತನ್ನು ಸೃಷ್ಟಿಸಿದ್ದು ಯೇಸು ಪರಮಾಪ್ತ ನೀವು ಉಪ್ಪಾರಹಳ್ಳಿಯಲ್ಲಿರುವ ಚರ್ಚ್ ಗೆ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊಕರಲಿದೆ ಎಂದು ಯುವಕರನ್ನು ಮತಾಂತರ ಮಾಡಲು ಪ್ರಚೋದನೆ ನೀಡಿದ್ದಾರೆ, ಅಲ್ಲದೆ ಹಿಂದೂ ಧರ್ಮದ ದೇವರಾದ ಗಣೇಶನನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ರವಿ ಜಯನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಯುವತಿಯರ ಮೂಲಕ ಹಿಂದೂ ಯುವಕರ ಸ್ನೇಹ ಸಂಪಾದಿಸಿ, ಆತ್ಮೀಯತೆ ಬೆಳೆಸಿಕೊಂಡು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಜಾಲ ನಗರದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಜರಂಗದಳ ಮುಖಂಡ ತರುಣ್ ಆರೋಪಿಸಿದ್ದಾರೆ.

Share this Article
Verified by MonsterInsights