ಮಧುಗಿರಿ : ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದವರಲ್ಲಿ 12 ಸೋಂಕಿತರಲ್ಲಿ ಇಬ್ಬರನ್ನು ಮಧುಗಿರಿ , ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಗ್ರಾ. ಪಂ ನವರು ಕಲುಷಿತ ನೀರು ಸರಬರಾಜು ಮಾಡಿರುವ ಪ್ರಕರಣದಲ್ಲಿ ಭಾನುವಾರ ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿದ್ದು, ಸಾರ್ವಜನಿಕ ಆಸ್ಪತ್ರೆ ಯಲ್ಲಿದ್ದ 13 ಜನರಲ್ಲಿ 4 ಜನರು ಬಿಡುಗಡೆಯಾಗಿದ್ದು 9 ಜನರು ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದು ಗ್ರಾಮದಲ್ಲಿ ವಾಂತಿ ಭೇಧಿ ಪ್ರಕರಣಗಳು ಕಳೆದ ಮೂರು ದಿನಗಳಿಂದ ಹತೋಟಿ ಬರುತ್ತಿದೆ.
ವಿಧಾನ ಪರಿಷತ್ ರಾಜೇಂದ್ರ ರಾಜಣ್ಣ ತುಮುಲ್ ನ ವ್ಯವಸ್ಥಾಪಕರೊಂದಿಗೆ ದೂರವಾಣಿ ಮೂಲಕ ಚರ್ಚಿಸುವುದರ ಮೂಲಕ 22 ಸಾವಿರ ಲೀಟರ್ ನಷ್ಟು ಶುದ್ಧ ನೀರನ್ನು ಚಿನ್ನೇನಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕಳುಹಿಸಿ ಕೊಟ್ಟಿದ್ದಾರೆ.
ಇನ್ನೂ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಹಶೀಲ್ದಾರ್ ಸಿಗ್ಬತ್ ಉಲ್ಲಾ ಪ್ರತಿ ದಿನ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡುವುದರ ಮೂಲಕ ತಾಲೂಕು ಆಡಳಿತದ ವತಿಯಿಂದ ಸೋಂಕಿತರಿಗೆ ಮತ್ತು ಗ್ರಾಮಸ್ಥರಿಗೆ ಸಕಾಲಕ್ಕೆ ದೊರೆಯ ಬಹುದಾದ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟು ನಿಗಾವಹಿಸುತ್ತಿದ್ದಾರೆ.
ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯ ಚಂದ್ರಕಾಂತ್ ಹಾಗೂ ಆಶಾ ಕಾರ್ಯಕರ್ತೆರು ದಾದಿಯರು , ಹಾಸ್ಟಲ್ ವಾರ್ಡನ್ ಗಳು , ಗ್ರಾ.ಪಂ ಸಿಬ್ಬಂದಿಗಳು ಮತ್ತು ನೋಡಲ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.