ಪಾವಗಡ : ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮುಖ್ಯ ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಶಿಕ್ಷಕರಿಗಳಿಗೆ ತೀವ್ರ ಗಾಯಗಳಾಗಿರುವ ಘಟನೆ ಪಟ್ಟಣದ ತುಮಕೂರು ರಸ್ತೆಯ ಕಣಿವೆನಹಳ್ಳಿ ಗೇಟ್ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ( ಪ್ರೌಢಶಾಲಾ ವಿಭಾಗ ) ಉಪ ಪ್ರಾಂಶುಪಾಲರಾದ ಓ ಧನಂಜಯ್ಯ(58) ಮತ್ತು ಗೌಡೇಟಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀ ಕೃಷ್ಣ (49) ಮೃತರು.
ತುಮಕೂರಿನಲ್ಲಿ ಶಿಕ್ಷಕರೊಬ್ಬರ ಮಗಳ ಆರತಕ್ಷತೆ ಮುಗಿಸಿ ಮರಳಿ ಪಾವಗಡಕ್ಕೆ ಬರುವಂತಹ ಸಮಯದಲ್ಲಿ ಪಾವಗಡ ತುಮಕೂರು ಮಾರ್ಗದ ಕಣಿವೆನಹಳ್ಳಿ ಗೇಟ್ ಬಳಿ ಇರುವ ನಯಾರ ಪೆಟ್ರೋಲ್ ಬಂಕ್ ಸಮೀಪದಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಶ್ರೀ ಕೃಷ್ಣ ಮತ್ತು ಓ.ಧನಂಜಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರಿನಲ್ಲಿದ್ದ ಮತ್ತಿಬ್ಬರು ಶಿಕ್ಷಕರಗಳಾದ ಆರ್ ಎಂ ನರಸಿಂಹ ಮತ್ತು ವೆಂಕಟಾಚಲಪತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಓ ಧನಂಜಯ್ಯ ರವರು ತಾಲ್ಲೂಕಿನ ಕೆಂಚಮ್ಮನಹಳ್ಳಿಯ ಗ್ರಾಮದವರಾಗಿದ್ದು, ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ, ಉಪ ಪ್ರಾಂಶುಪಾಲರಾಗಿ, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಅಪಾರ ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿದ್ದರು.
ಶ್ರೀ ಕೃಷ್ಣ ರವರು ತಾಲ್ಲೂಕಿನ ವೀರ್ಲಗೊಂದಿ ಗ್ರಾಮದವರಾಗಿದ್ದು, ಗೌಡೇಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ, ಪ್ರಭಾರ ಮುಖ್ಯ ಶಿಕ್ಷಕರಾಗಿ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದರು.
ಘಟನೆ ತಿಳಿದ ನಂತರ ಕೆ ಸುರೇಶ ಸಿ ಐ ಸುರೇಶ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ