ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ರಾಝ್ಯ ಸರ್ಕಾರದ ವಿರುದ್ದ ಕಿಡಿಕಾರುತ್ತಿದ್ದಾರೆ. ಈ ನಡುವೆ ಇತ್ತೀಚಿಗೆ ರಾಜ್ಯ ಸರ್ಕಾರ ನಡೆಸಿರುವ ವರ್ಗಾವಣೆ ದಂಧೆಯಲ್ಲಿ ಹಣದ ವಾಸನೆ ಕೂಡ ಕಂಡು ಬಂದಿದೆ ಅಂಥ ಆರೋಪಿಸಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ, ಸುದ್ದಿಗಾರರ ಜೊತೆಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು ಅರ್ಜೆಂಟ್ ಏನಿದೆ ಬ್ರದರ್, ಇನ್ನೂ ಟೈಮ್ ಇದೆ. ಸಮಯ ಬಂದಾಗ ಪೆನ್ ಡ್ರೈವ್ ರಹಸ್ಯ ಬಯಲಾಗಲಿದೆ ಅಂತ ಹೇಳಿದರು. ಇನ್ನೂ ಇಂದು ಪೆನ್ ಡ್ರೈವ್ ನಲ್ಲಿರುವ ರಹಸ್ಯವನ್ನು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಬಯಲು ಮಾಡಲಿದಾರೆ ಎನ್ನಲಾಗುತಿತ್ತು, ಆದರೆ ಅದಕ್ಕೆ ಇನ್ನೂ ಸಮಯ ಕೂಡ ಬಂದಿಲ್ಲ.