ಸಿಎಂ ತವರು ಜಿಲ್ಲೆಯಲ್ಲಿ ಮೊಳಗಿದ ಕಾಂಗ್ರೆಸ್ ಕಹಳೆ
ಹಾವೇರಿ: ಮೋದಿ ನೋಡಿ ಜನ ಮತ ನೀಡುತ್ತಾರೆ ಎಂದು ಭ್ರಮೆಯಲ್ಲಿ ಅವರು ಇದ್ದಾರೆ. ನಾನು ಲಂಚ ತೆಗೆದುಕೊಳ್ಳುವುದಿಲ್ಲ. ಮತ್ತೊಬ್ಬರು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಹೇಳುವ ಪ್ರಧಾನಿ ಮೋದಿ ಸಿಎಂ ಬೊಮ್ಮಾಯಿ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ಸ್ವಂತ ತವರು ಜಿಲ್ಲೆಯ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಬುದ್ಧಿ ಕಲಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕತ್ತು ಇದ್ರೆ ಮೊದಲು 40% ಕಮಿಷನ್ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಅಧಿಕಾರ ಹಾಗೂ ಹಣದ ಆಸೆಗೆ ಮಾರಿಕೊಂಡು ಬಿಜೆಪಿ ಪಕ್ಷ ಸೇರಿದವರು ಈಗ ಪತಿವ್ರತೆಯರ ಹಾಗೆ ಮಾತಾಡುತ್ತಿದ್ದಾರೆ. ಬಿಜೆಪಿಗೆ ವಲಸೆ ಹೋದ ಶಾಸಕರ ಉಪ ಚುನಾವಣೆ ಖರ್ಚಿಗೆ ಯಡಿಯೂರಪ್ಪ ಹಣ ನೀಡಿದ್ದಾರೆ ಎಂದು ಅವರ ಪಕ್ಷದ ಶಾಸಕ ಬಸನಗೌಡ ಯತ್ನಾಳ ಹೇಳಿದ್ದಾರೆ. ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗಬೇಕಾದರೆ ₹ 100 ಕೋಟಿ ಪಕ್ಷಕ್ಕೆ ನೀಡಬೇಕೆಂದು ಅವರೆ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ರಾಜ್ಯ ಕಂಡ ಅತ್ಯಂತ ದುರ್ಬಲ, ಭ್ರಷ್ಟ ಸಿಎಂ ಅಂದ್ರೆ ಬಸವರಾಜ ಬೊಮ್ಮಾಯಿ ಎಂದು ಆರೋಪಿಸಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾಲದ ಪ್ರಮಾಣ ಏರಿಕೆಯಾಗಿದೆ. ಬೊಮ್ಮಾಯಿ ಅಧಿಕಾರಕ್ಕೆ ಬಂದು ಹೋಳಿಗೆ ತಿನ್ನುತ್ತಾ ಜನ ಸಾಮಾನ್ಯರ ಮೇಲೆ ಸಾಲದ ಹೊರೆ ಹೇರಿದ್ದಾರೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಮೆದಳು ಮತ್ತು ನಾಲಿಗೆಗೆ ಲಿಂಕ್ ತಪ್ಪಿದೆ. ಅವನಿಗೆ ಬುದ್ದಿ ಇಲ್ಲಾ. ಅವರ ಬಗ್ಗೆ ಮಾತನಾಡಲ್ಲ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಅಲಂ ವೀರಭದ್ರಪ್ಪ, ಬಸವರಾಜ ರಾಯರೆಡ್ಡಿ, ಎಚ್.ಎಂ ರೇವಣ್ಣ, ಕೆಪಿಸಿಸಿ ಉಪಾಧ್ಯಕ್ಷರಾದ ಡಿ.ಆರ್ ಪಾಟೀಲ, ನಾರಾಯಣಸ್ವಾಮಿ, ಶಿವರಾಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪುಪ್ಪ ಅಮರನಾಥ, ಮಯೂರ ಜಯಕುಮಾರ, ಪ್ರಕಾಶ ರಾಠೋಡ, ಬಿ.ಆರ್.ಪಾಟೀಲ,ಮಾಜಿ ಸಂಸದ ಐ.ಜಿ.ಸನದಿ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಬಸವರಾಜ ಶಿವಣ್ಣವರ, ರುದ್ರಪ್ಪ ಲಮಾಣಿ, ಮನೋಹರ ತಹಶಿಲ್ದಾರ, ಅಜ್ಜಪೀರ ಖಾದ್ರಿ, ಕೆ.ಬಿ. ಕೋಳಿವಾಡ ನಗರಸಭಾಧ್ಯಕ್ಷ ಸಂಜೀವ ಕುಮಾರ ನೀರಲಗಿ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಯು.ಬಿ.ಬಣಕಾರ, ಸೋಮಣ್ಣ ಬೇವಿನಮರದ, ಎಸ್.ಆರ್. ಪಾಟೀಲ, ಮಹಮ್ಮದ್ ನಲಪಾಡ್ ಸೇರಿದಂತೆ ಇತರರು ಇದ್ದರು.