ನಗರಕ್ಕೆ ಜ್ಯೋತಿಗಣೇಶ್ ಗೆ ಟಿಕೆಟ್, ಸೊಗಡುಗೆ ನಿರಾಸೆ
ತುಮಕೂರು: ಕುತೂಹಲ ಕೆರಳಿಸಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗೆ ಖಚಿತವಾಗಿದೆ.
ಮಾಜಿ ಸಚಿವ ಸೊಗಡು ಶಿವಣ್ಣ, ಹಾಲಿ ಶಾಸಕ ಜ್ಯೋತಿಗಣೇಶ್ ನಡುವಿನ ಪೈಪೋಟಿಯಲ್ಲಿ ವರಿಷ್ಠರು ಹಾಲಿ ಶಾಸಕ ಜ್ಯೋತಿಗಣೇಶ್ ಅವರಿಗೆ ಮಣೆ ಹಾಕಿದ್ದಾರೆ.
ಜೋಳಿಗೆ ಹಿಡಿದು ರಸ್ತೆಗೆ ಇಳಿದಿದ್ದ ಮಾಜಿ ಸಚಿವ ಸೊಗಡು ಶಿವಣ್ಣರಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಪಕ್ಷ ಗೆಲುವಿನ ಗುರಿಯೊಂದಿಗೆ ಜ್ಯೋತಿಗಣೇಶ್ ಗೆ ಟಿಕೆಟ್ ನಿಗದಿಯಾಗಿದೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ನಿವೃತ್ತ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು ಕಣಕ್ಕೆ ಇಳಿಯಲಿದ್ದಾರೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಬಹಿರಂಗವಾಗಿ ಪ್ರಚಾರಕ್ಕೆ ಇಳಿದಿರುವ ಎಲ್.ಸಿ.ನಾಗರಾಜು ನಾಯಕ ಸಮುದಾಯಕ್ಕೆ ಸೇರಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ಪಕ್ಷಕ್ಕಿಂತ ವೈಯಕ್ತಿಕ ಪೈಪೋಟಿಗೆ ಕಾರಣವಾಗಲಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಅವರಿಗೆ ಟಿಕೆಟ್ ಅಂತಿಮವಾಗಿದೆ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಮಾದಿಗ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಕೊರಟಗೆರೆಯಲ್ಲಿ ಕಮಲ ಅರಳಸುವ ತಂತ್ರಕ್ಕೆ ಮುಂದಾಗಿದೆ.
ಉಳಿದಂತೆ ಚಿಕ್ಕನಾಯಕನಹಳ್ಳಿ ಮಾಧುಸ್ವಾಮಿ, ತಿಪಟೂರು ಬಿ.ಸಿ.ನಾಗೇಶ್, ತುರುವೇಕೆರೆ ಮಸಾಲೆ ಜಯರಾಂ, ಸಿರಾ ರಾಜೇಶ್ ಗೌಡ, ಪಾವಗಡ ಕೃಷ್ಣಾನಾಯ್ಕ್, ತುಮಕೂರು ಗ್ರಾಮಾಂತರ ಸುರೇಶ್ ಗೌಡ, ಕುಣಿಗಲ್ ಡಿ.ಕೃಷ್ಣಕುಮಾರ್, ಅಭ್ಯರ್ಥಿಗಳಾಗಿದ್ದಾರೆ. ಇನ್ನು ತೀವ್ರ ಪೈಪೋಟಿ ಇರುವ ಗುಬ್ಬಿ ಅಂತಿಮಗೊಳಿಸಿಲ್ಲ.