ಬಳ್ಳಾರಿಗೆ ಬರಲಿದೆ ಬರೋಬ್ಬರಿ 20 ಕೋಟಿ ನಾಯಿ!!

ಬಳ್ಳಾರಿ:ಜಿಲ್ಲಾಡಳಿತ ವತಿಯಿಂದ ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಲು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22 ರಂದು ಬೆಳಗ್ಗೆ 8ರಿಂದ ವಿವಿಧ ತಳಿಯ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ನಗರದ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಬಳ್ಳಾರಿ ನಗರವಾಸಿಗಳು ತಮ್ಮ ತಮ್ಮ ಶ್ವಾನಗಳನ್ನು ಪ್ರದರ್ಶಿಸಲು ಈಗಾಗಲೇ ನೊಂದಣಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಪರ್ಧೆಯಲ್ಲಿ ಶ್ವಾನಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಜಾತಿ ಶ್ವಾನಗಳಿಗೆ ಮಾತ್ರ ಅವಕಾಶವಿರುತ್ತದೆ. ಶ್ವಾನ ಪ್ರದರ್ಶನಕ್ಕೆ ನೊಂದಣಿಯು ಉಚಿತವಾಗಿರುತ್ತದೆ. ನೊಂದಣಿ ಮಾಡಿಸಲು ಕೊನೆಯ ದಿನ ಜನವರಿ 20ರಂದು ಸಂಜೆ 5 ರವರೆಗೆ ಇರುತ್ತದೆ.

ರೂ.20 ಕೋಟಿ ಮೌಲ್ಯದ ಶ್ವಾನ ಬಳ್ಳಾರಿಗೆ:

ರಾಜ್ಯದಲ್ಲಿ ಅತ್ಯಂತ ದುಬಾರಿ ಬೆಲೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಾಗೂ ರಾಜ್ಯ ಸೇರಿ ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದಿರುವ ಬೆಂಗಳೂರಿನ ಸತೀಶ್ ಕೆಡಬಾಮ್ಸ್ ಅವರ ಕೆಡಬಾಮ್ಸ್ ಹೈದರ್ ಎನ್ನುವ ಕಕೇಶಿಯಾ ಶೆಫರ್ಡ್ ಎಂಬ ವಿಶೇಷ ತಳಿಯ ಶ್ವಾನದ ಬೆಲೆಯು ಬರೋಬ್ಬರಿ ರೂ.20 ಕೋಟಿಯ ಶ್ವಾನವಾಗಿದೆ. ಸಿಂಹದಂತೆ ಕಾಣುವ ಅಪರೂಪದ ಈ ಶ್ವಾನದ ತೂಕ 100 ಕೆಜಿ ಇದೆ. ನಿಂತಾಗ ಎತ್ತರದಲ್ಲೂ 6 ಅಡಿ ಇದ್ದು, ಉಳಿದ ಸಾಮಾನ್ಯ ನಾಯಿಗಳಿಗಿಂತ ತುಂಬಾ ದೊಡ್ಡದಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಇದು ಬಳ್ಳಾರಿ ಉತ್ಸವದ ಮೆರಗನ್ನು ಹೆಚ್ಚಿಸಲು ಜ.22ರಂದು ನಡೆಯುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಶ್ವಾನ ಪ್ರದರ್ಶನದಲ್ಲಿ ಭಾಗವಹಿಸುವ ಮಾಲೀಕರಿಗೆ ಸೂಚನೆಗಳು:

ಶ್ವಾನ ಪ್ರದರ್ಶನಕ್ಕೆ ಬರುವ ಶ್ವಾನಗಳಿಗೆ ಸರಿಯಾದ ಬೆಲ್ಟ್ ಮತ್ತು ಚೈನ್‍ನ್ನು ತೊಡಿಸಿಕೊಂಡು ಬರಬೇಕು. ಶ್ವಾನದ ಉತ್ತಮ ಗುಣಗಳನ್ನು ನಿರ್ಣಾಯಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು. ಶ್ವಾನದ ಸಂಪೂರ್ಣ ಮಾಹಿತಿ ಮಾಲೀಕರು ತಿಳಿದಿರಬೇಕು. ಶ್ವಾನ ಪ್ರದರ್ಶನದ ದಿನಾಂಕದಂದು ಸ್ನಾನ ಮಾಡಿಸಬಾರದು. ಶ್ವಾನ ಪ್ರದರ್ಶನದಂದು ನಿರ್ಣಾಯಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ಶ್ವಾನದ ದೇಹದ ಅಂಗ ರಚನೆಯ ಜೊತೆಗೆ ಕೂದಲಿನ ಕಾಂತಿ, ಹಲ್ಲುಗಳನ್ನು, ಮೂಗು, ಕಿವಿಗಳನ್ನು ಪರೀಕ್ಷಿಸುವುದರಿಂದ ಅವುಗಳನ್ನು ಶುಚಿಯಾಗಿಟ್ಟಿರಬೇಕು.

ಶ್ವಾನ ಪ್ರದರ್ಶನದಂದು ತುರ್ತು ಚಿಕಿತ್ಸೆಯ ಸೌಲಭ್ಯಗಳು ಲಭ್ಯವಿರುತ್ತದೆ.ಸ್ಪರ್ಧೆಯ ಬಹುಮಾನದ ವಿವರಗಳು:

ಪ್ರತಿ ತಳಿಗೆ ಮೊದಲನೇ ಸ್ಥಾನ ರೂ.3 ಸಾವಿರ, ಎರಡನೇ ಸ್ಥಾನ ರೂ.2 ಸಾವಿರದಂತೆ ಬಹುಮಾನ ನೀಡಲಾಗುವುದು. ಎಲ್ಲಾ ತಳಿಯ ಪುಟ್ಟ ನಾಯಿ ಮರಿಗಳಿಗೆ (3 ರಿಂದ 12ನೇ ತಿಂಗಳವರೆಗಿನ) ಮೊದಲನೇ ಸ್ಥಾನ ರೂ.3 ಸಾವಿರ, ಎರಡನೇ ಸ್ಥಾನ ರೂ.2 ಸಾವಿರ ಮತ್ತು ಮೂರನೇ ಸ್ಥಾನ ರೂ.1 ಸಾವಿರದಂತೆ ಬಹುಮಾನ ನೀಡಲಾಗುವುದು. ಪ್ರತಿ ವಯಸ್ಕ ಗುಂಪಿನ ಶ್ವಾನ ತಳಿಯಲ್ಲಿ ಮೊದಲ ಸ್ಥಾನ ಪಡೆದ ಶ್ವಾನವನ್ನು ಕೊನೆಯ ಸುತ್ತಾದ “ಪ್ರದರ್ಶನದ ಉತ್ತಮ ತಳಿ” ಸ್ಪರ್ಧೆಗೆ ಆಯ್ಕೆಮಾಡಿ ರೂ.10 ಸಾವಿರ ಬಹುಮಾನವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗಾಗಿ ಮೊ.9590576964, 8310089055, 9980254131, 9916503138, 9686041441, 9880678426 ಗೆ ಸಂಪರ್ಕಿಸಬಹುದು.

 

Verified by MonsterInsights