ಹತ್ತು ಸಾವಿರ ಅಂತರ, ನಂಟು ಬಿಡದ ಮಾಧುಸ್ವಾಮಿ, ಸುರೇಶ್ ಬಾಬು

ಡೆಸ್ಕ್
1 Min Read

ತುಮಕೂರು: 2018ರಲ್ಲಿನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜೆ.ಸಿ.ಮಾಧುಸ್ವಾಮಿ ಅವರು ಜೆಡಿಎಸ್ ನ ಸುರೇಶ್ ಬಾಬು ಅವರು 10 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಿ ಸಚಿವರಾಗಿದ್ದು ಇತಿಹಾಸ.

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್ ನಿಂದ ಸುರೇಶ್ ಬಾಬು, ಕಾಂಗ್ರೆಸ್ ನಿಂದ ಕೆ.ಎಸ್.ಕಿರಣ್ ಕುಮಾರ್ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಸಹ 2018ರಲ್ಲಿ ಬಂದಿದ್ದ ಫಲಿತಾಂಶವೇ ಮರುಕಳಿಸಿದೆ. 10 ಸಾವಿರಕ್ಕೂ ಹೆಚ್ಚು ಅಂತರದಿಂದಲೇ ಜೆಡಿಎಸ್ ನ ಸುರೇಶ್ ಬಾಬು ಗೆಲುವು ಸಾಧಿಸುವ ಮೂಲಕ ಮುಯ್ಯಿ ತೀರಿಸಿಕೊಂಡಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದಿದ್ದ ಕೆ.ಎಸ್.ಕಿರಣ್ ಕುಮಾರ್ 50996 ಮತಗಳನ್ನು ಪಡೆದರೆ, ಜೆ.ಸಿ.ಮಾಧುಸ್ವಾಮಿ 60994 ಮತಗಳನ್ನು ಪಡೆದರೆ, ಸಿ.ಬಿ.ಸುರೇಶ್ ಬಾಬು 71036 ಮತಗಳನ್ನು ಪಡೆದಿದ್ದಾರೆ. ಒಟ್ಟಾರೆ ಮತಗಳಲ್ಲಿ ಶೇ.5ರಷ್ಟು ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

 

===

 

Share this Article
Verified by MonsterInsights