ಗೆಳೆಯರ ಬಳಗದ ಟ್ಯಾಂಕರ್ ಡಿಕ್ಕಿ ಹೊಡೆದು ವಿಶೇಷಚೇತನ ಸಾವು

ಡೆಸ್ಕ್
0 Min Read

ತುಮಕೂರು: ಗೆಳೆಯರ ಬಳಗದ ಕುಡಿಯುವ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ವಿಶೇಷ ಚೇತನರೊಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ನಗರ ಭದ್ರಮ್ಮ ಕಲ್ಯಾಣ ಮಂಟಪದ ಬಳಿ ತ್ರಿಚಕ್ರ ವಾಹನದಲ್ಲಿ ಬರುತ್ತಿದ್ದ ವಿಶೇಷ ಚೇತನ ಚಂದ್ರಶೇಖರ್ ಅವರಿಗೆ ಜೆಡಿಎಸ್ ಮುಖಂಡ ಗೋವಿಂದರಾಜು ಅವರಿಗೆ ಸೇರಿದ ಕುಡಿಯುವ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಚಂದ್ರಶೇಖರ್ ಸಾವನ್ನಪ್ಪಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
Verified by MonsterInsights