ಸುರೇಶ್ ಬಾಬು ಕಾಂಗ್ರೆಸ್ ಸೇರಲು ಬಂದಿದ್ದರು: ಡಿ.ಕೆ.ಶಿವಕುಮಾರ್

ಡೆಸ್ಕ್
0 Min Read

ತುಮಕೂರು: ಜೆಡಿಎಸ್ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಕಾಂಗ್ರೆಸ್ ಸೇರಲು ನನ್ನ ಬಳಿ ಬಂದಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿರಾ ತಾಲ್ಲೂಕು ಬುಕ್ಕಾಪಟ್ಟಣದಲ್ಲಿ ಮಾತನಾಡಿರುವ ಅವರು, ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಕೆಲವು ಕಂಡೀಷನ್ ಹಾಕಿದ್ದೆ ಅದರಿಂದ ಅವರು ಸೇರಲಿಲ್ಲ, ನಾನು ಕಿರಣ್ ಕುಮಾರ್ ಗೆ ಗಾಳ ಹಾಕಿದ್ದೆ ಎಂದಿದ್ದಾರೆ.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಲವು ವರ್ಷಗಳಿಂದ ಗೆದ್ದಿಲ್ಲ, ಈ ಬಾರಿ ಗೆಲ್ಲಬೇಕು ಅದಕ್ಕಾಗಿ ಕಿರಣ್ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದೇನೆ, ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

Share this Article
Verified by MonsterInsights