ಅಂತ್ಯ ಸುಬ್ರಮಣ್ಯೇಶ್ವರನ ಬ್ರಹ್ಮ ರಥೋತ್ಸವ ಸಂಪನ್ನ

ಡೆಸ್ಕ್
1 Min Read

ಪಾವಗಡ : ತಾಲ್ಲೂಕಿನ ನಾಗಲಮಡಿಕೆಯಲ್ಲಿರುವ ಅಂತ್ಯ  ಸುಬ್ರಮಣ್ಯೇಶ್ವರನ ಬ್ರಹ್ಮರಥೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು.

 ರಥೋತ್ಸವದ ಅಂಗವಾಗಿ ಮಹಾನ್ಯಾಸ ಪೂರ್ವಕ ಏಕಾದಶ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, ಕುಂಕುಮಾರ್ಚನೆ, ವಿಶೇಷ ಪೂಜೆ ಹೋಮ, ರಥಾಂಗ ಹೋಮ ಗಳನ್ನು ಪ್ರಧಾನ ಅರ್ಚಕ ಪಿ. ಬದರಿನಾಥ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ  ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ, ಮಧ್ಯಾಹ್ನ 12 20ಕ್ಕೆ ಮೇಷ ಲಗ್ನದಲ್ಲಿ ಶಾಸಕ ಎಚ್ ವಿ ವೆಂಕಟೇಶ್, ಮಾಜಿ ಶಾಸಕ ವೆಂಕಟರಮಣಪ್ಪ, AC ಶಿವಪ್ಪ, ತಹಸೀಲ್ದಾರ್ ವರದರಾಜು  ಬ್ರಹ್ಮ ರಥೋತ್ಸವಕ್ಕೆ  ಚಾಲನೆ ನೀಡಿದರು.
ರಥ ಚಾಲನೆಯಾಗುತ್ತಿದ್ದಂತೆ ನೆರೆದಿದ್ದ ಭಕ್ತಾದಿಗಳು  ಮನದಲ್ಲಿ  ಸುಬ್ರಮಣ್ಯ ನನ್ನ ನೆನೆದು ರಥದ ಮೇಲೆ ಬಾಳೆಹಣ್ಣುಗಳನ್ನು ಎಸೆದು  ಹರಕೆ ತೀರಿಸಿಕೊಂಡರು.
ಅನ್ನದ ರಾಶಿಯ ಮೇಲೆ ಉತ್ಸವಮೂರ್ತಿ ಇರಿಸಿ  ಪೂಜೆ ಸಲ್ಲಿಸಿದ ನಂತರ  ಅನ್ನದ ರಾಶಿ ಇಬ್ಬಾಗ ವಾಗುವುದನ್ನು ಭಕ್ತಾದಿಗಳು  ಕುತೂಹಲದಿಂದ ವೀಕ್ಷಿಸಿದರು.
ಸಾವಿರಾರು ಜನರು ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಬ್ರಹ್ಮಣ್ಯೇಶ್ವರನ ಮೂಲ ವಿಗ್ರಹದ ದರ್ಶನಕ್ಕಾಗಿ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡಿರು. ದೇಗುಲದ ಮುಂಭಾಗದ ಇರುವ ನಾಗ ವಿಗ್ರಹಗಳನ್ನು ಸ್ವಚ್ಛಗೊಳಿಸಿ, ಹಾಲೆರೆದು ಪೂಜೆ ಸಲ್ಲಿಸಿದರು.
ದನಗಳ ಜಾತ್ರೆಯ ಪ್ರಯುಕ್ತ  ರೈತರು ದನಗಳನ್ನು ಕೊಳ್ಳುವುದರಲ್ಲಿ ಮತ್ತು ಮಾರಾಟ ಮಾಡುವುದರಲ್ಲಿ ನಿರತರಾಗಿದ್ದರು.ನೆರೆದಿದ್ದ ಭಕ್ತಾದಿಗಳು  ಜಾತ್ರೆಯನ್ನು ವೀಕ್ಷಿಸಿ  ಅಗತ್ಯ ವಸ್ತುಗಳನ್ನು ಕೊಂಡುಕೊಂಡರು.
ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಯಿತು.ಯಾವುದೇ ಹಂತಕರ ಘಟನೆಗಳು ನಡೆದಂತೆ  ಪೊಲೀಸ್ ಸಿಬ್ಬಂದಿಗಳು  ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು.
Share this Article
Verified by MonsterInsights