ತುಮಕೂರು (TUMAKURU) ಶಾಲಾ ಶಿಕ್ಷಣ ಇಲಾಖೆ ಮತ್ತು ಆಚಾರ್ಯ ವಿದ್ಯಾಪೀಠ ಸಹಯೋಗದಲ್ಲಿ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ (SSIT) ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ನಗರ-3 ಪ್ರೌಢಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅಂಕಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಗುಂಪು ಸ್ಪರ್ಧೆಗಳು: ಬಾಲಕರ ವಾಲಿಬಾಲ್ ಪ್ರಥಮ,ಬಾಲಕಿಯರ ವಾಲಿಬಾಲ್ ಮತ್ತು ಥ್ರೋ ಬಾಲ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ
ಅಥ್ಲೆಟಿಕ್ಸ್: ಬಾಲಕರ ವಿಭಾಗದಲ್ಲಿ ತ್ರಿವಿಧ ಜಿಗಿತದಲ್ಲಿ ವಿಶೃತ್ ಪ್ರಥಮ, ಗುಂಡು ಎಸೆತದಲ್ಲಿ ಸ್ವಾಗತ್ ಪ್ರಥಮ, ಡಿಸ್ಕಸ್ ಥ್ರೋ ದ್ವೀತಿಯ, 3000 ಮೀ ಓಟ ಜೀವನ್ ಎಚ್.ಎನ್ ತೃತೀಯ, ಜಾವ್ಲಿನ್ ಥ್ರೋ ಸುಪ್ರಿತ್ ಶ್ರೀವತ್ಸ ತೃತೀಯ, 200 ಮತ್ತು 400 ಮೀ ಓಟ ಮಹಮ್ಮದ್ ನವಾಜ್ ತೃತೀಯ ಸ್ಥಾನ ಪಡೆದಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಗುಂಡು ಎಸೆತ ಮತ್ತು ಡಿಸ್ಕಸ್ ಥ್ರೋ ಸೋನಿಯಾ ಪ್ರಥಮ, 3000 ಮೀ ಓಟದ ಸ್ಪರ್ಧೆ ತೃಪ್ತಿ ದ್ವೀತಿಯ, ಹಾಮರ್ ಥ್ರೋ ಇಂಚರ ದ್ವೀತಿಯ, ಸವಿತ ತೃತೀಯ, ಜಾವ್ಲಿನ್ ಥ್ರೋ ಸಿಂಚನ ದ್ವೀತಿಯ, ಎತ್ತರ ಜಿಗಿತ ರಿಷಿಕಾ ತೃತೀಯ ಸ್ಥಾನ ಪಡೆದಿರುತ್ತಾರೆ.
ಅಂಕಿತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಅಂಬ್ಲಿ ಅವರು ವಿಜೇತ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು. ಪ್ರಾಂಶುಪಾಲರಾದ ಎ ಮಂಜುನಾಥ ಶರ್ಮಾ, ದೈಹಿಕ ಶಿಕ್ಷಕ ಜಿ.ಎನ್ ಶ್ರೀನಿವಾಸ್ ಇದ್ದರು.