ತುಮಕೂರು: ಗರ್ಭೀಣಿಗೆ ಸಮರ್ಪಕ ಆರೋಗ್ಯ ಸೇವೆ ಸಿಗದೇ ಹಸುಗೂಸು ಸಾವನ್ನಪ್ಪಿರುವ ಅಮಾನವೀಯ ಘಟನೆ ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಅರೇಗುಜ್ಜನಹಳ್ಳಿ ಗ್ರಾಮದ 27 ವರ್ಷದ ಯುವತಿ, ಮದುವೆಯಾಗಿರುವ ವ್ಯಕ್ತಿಯೊಂದಿಗೆ ಕಳೆದ ಐದು ವರ್ಷದಿಂದ ಸಹಜೀವನ ನಡೆಸುತ್ತಿದ್ದು, ಗರ್ಭೀಣಿಯಾದ ನಂತರ ಸೂಕ್ತ ಆರೋಗ್ಯ ಸೇವೆ ದೊರೆತಿಲ್ಲ ಎನ್ನಲಾಗಿದೆ.
ಮಂಗಳವಾರ ರಾತ್ರಿ ಆಕೆಗೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ, ಹುಟ್ಟಿದ ಮಗುವನ್ನು ಹೊರಗೆ ಬಿಟ್ಟು ಮನೆಗೆ ಹೋಗಿದ್ದ ಯುವತಿ ಬೆಳಿಗ್ಗೆ ಪ್ರಾಥಮಿಕ ಚಿಕಿತ್ಸೆ ದೊರಕದೇ, ಚಳಿಯಿಂದಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕ್ಯಾತ್ಸಂದ್ರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಗರ್ಭೀಣಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.