ಪರಮೇಶ್ವರ್ ವಿರುದ್ಧ ಅಪಪ್ರಚಾರ: ಮಾದಿಗ ಮುಖಂಡರ ಕಿಡಿ

ಕೊರಟಗೆರೆ: ಮಾದಿಗ ಸಮುದಾಯವನ್ನು ಡಾ.ಜಿ.ಪರಮೇಶ್ವರ್ ಎಂದೂ ಕಡೆಗಣಿಸಿಲ್ಲ, ಅವಹೇಳನ ಮಾಡಿಲ್ಲ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರಯ್ಯ ತಿಳಿಸಿದರು.

ರಾಜೀವ್ ಭವನದಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರ ಕುಟುಂಬ ಮೊದಲಿನಿಂದಲೂ ಮಾದಿಗ ಸಮುದಾಯದೊಂದಿಗೆ ಸೌಹಾರ್ದತೆಯನ್ನು ಹೊಂದಿದ್ದು, ವಿರೋಧಿಗಳು ಅದನ್ನು ಕೆಡಿಸಲು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

2008 ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನಾನು ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರೂ ಈ ಕ್ಷೇತ್ರದ ಮಾದಿಗ ಸಮುದಾಯ ನನಗೆ ಮತ ನಿಡದೆ ಉತ್ತಮ ವ್ಯಕ್ತಿ ಅಭಿವೃದ್ದಿಯ ಹರಿಕಾರ ಎಂಬ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಡಾ.ಜಿ.ಪರಮೇಶ್ವರ್ ರವರಿಗೆ ಮತ ನೀಡಿ ಗೆಲ್ಲಿಸಿದ್ದರು, ಈ ಬಾರಿಯ ಚುನಾವಣೆಯಲ್ಲಿಯೂ ಮಾದಿಗ ಸಮುದಾಯ ಪರಮೇಶ್ವರ್ ಅವರ ಜೊತೆ ಇರಲಿದೆ ಎಂದರು.

ರಾಜಕೀಯ ವಿರೋಧಿಗಳನ್ನು ಆಡು ಭಾಷೆಯಲ್ಲಿ ಟೀಕಿಸಿದ್ದಾರೆ ವಿನಃ ಮಾದಿಗ ಸಮುದಾಯವನ್ನು ಅವಹೇಳನ ಮಾಡಿಲ್ಲ, ರಾಜಕಾರಣಕ್ಕಾಗಿ ಪರಮೇಶ್ವರ್ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದ್ದು, ಇಂತಹ ಅಪಪ್ರಚಾರಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು.

ಮುಖಂಡ ಚಿಕ್ಕರಂಗಯ್ಯ ಮಾತನಾಡಿ ಕೇವಲ ರಾಜಕೀಯ ಲಾಭ ಪಡೆಯಲು ಹಾಗೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಎಆ.ಜಿ.ಪರಮೇಶ್ವರ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಈ ಸುಳ್ಳು ಆರೋಪಕ್ಕೆ ಮಾನ್ಯತೆ ನೀಡದೆ ಹಿಂದಿನಂತೆ ಡಾ.ಜಿ.ಪರಮೇಶ್ವರ್ ರವರನ್ನೇ ಬೆಂಬಲಿಸಿ ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಪ.ಪಂ.ಸದಸ್ಯ ನಂದೀಶ್ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳು ಒಂದಾಗಿದ್ದು ಡಾ.ಜಿ.ಪರಮೇಶ್ವರ್ ರವರನ್ನು ಬೆಂಬಲಿಸುತ್ತಿದ್ದ ಅವರ 35 ವರ್ಷಗಳ ರಾಜಕೀಯ ಜೀವನದಲ್ಲಿ ಎಂದು ಮಾದಿಗ ಸಮುದಾಯವನ್ನು ಕೀಳಾಗಿ ಕಂಡಿಲ್ಲ ಎಲ್ಲರನ್ನು ಅಣ್ಣ ತಮ್ಮ ರಂತೆ ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ ಮುಂದೆ ಯೂ ಎರಡೂ ಸಮುದಾಯಗಳು ಅಣ್ಣ-ತಮ್ಮಂದಿರಂತೆ ಕ್ಷೇತ್ರದಲ್ಲಿ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾದಿಗಸಮುದಾಯದ ಮುಖಂಡರುಗಳಾದ ಕಣಿವೇ ಹನುಮಂತರಾಯ, ಜಯರಾಂ, ಸುರೇಶ್, ನರಸಿಂಹಮೂರ್ತಿ, ತಾ.ಪಂ.ಮಾಜಿ ಉಪಾಧ್ಯಕ್ಷೆ ನರಸಮ್ಮ, ರಾಘವೇಂದ್ರ, ಗಂಗಯ್ಯ, ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ನಾಗರಾಜು, ದೊಡ್ಡಯ್ಯ, ಏರ್‌ಟೇಲ್ ಗೋಪಿ, ಮಲ್ಲೇಶಯ್ಯ, ನರಸಿಂಹಯ್ಯ, ಲಕ್ಷ್ಮೀನರಸಯ್ಯ, ಹನು ಮಂತರಾಜು, ಓಬಳೇಶ್, ರಾಮು, ಸೇರಿದಂತೆ ಇನ್ನಿತರರು ಹಾಜರಿದ್ದರು.

Verified by MonsterInsights