ಚುನಾವಣೆ ಸಮೀಪವಾಗುತ್ತಿದ್ದಂತೆ ಪಕ್ಷಾಂತರ ಹೆಚ್ಚಳವಾಗಿದ್ದು, ಕೊರಟಗೆರೆ ಕಾಂಗ್ರೆಸ್ ಗೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತುಂಬಾಡಿ ರಾಮಚಂದ್ರಪ್ಪ ಶಾಕ್ ನೀಡಿದ್ದು, ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಕಟ್ಟಾಳು ಎಂದೇ ಪ್ರಖ್ಯಾತರಾಗಿದ್ದ ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಕಾಂಗ್ರೇಸ್ ಪಕ್ಷದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ತುಂಬಾಡಿ ರಾಮಚಂದ್ರಪ್ಪ ಹಠಾತ್ ಪಕ್ಷ ತೊರೆದು ಬಿ.ಜೆ.ಪಿ ಅಭ್ಯರ್ಥಿ ಅನೀಲ್ ಕುಮಾರ್ ಸಮ್ಮಖದಲ್ಲಿ ಕೊರಟಗೆರೆಯ ಬಿ.ಜೆ.ಪಿ ಪಕ್ಷದ ಕಛೇರಿಯೇ ಪಕ್ಷ ಸೇರ್ಪಡೆಯಾಗಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸ್ವತಃ ಬಿ.ಜೆ.ಪಿ ಅಭ್ಯರ್ಥಿ ನಿವೃತ್ತ ಐ.ಎ.ಎಸ್ ಅಧಿಕಾರಿ ಅನೀಲ್ ಕುಮಾರ್ ತಮ್ಮ ಮುಖಪುಟದಲ್ಲಿ ತುಂಬಾಡಿ ರಾಮಚಂದ್ರಪ್ಪನವರ ಸೇರ್ಪಡೆ ಫೊಟೋಗಳನ್ನು ಹಾಕಿ ಕೊಂಡಿದ್ದು ಡಾ.ಜಿ ಪರಮೇಶ್ವರ್ ರವರು ಅತ್ಯಪ್ತರಲ್ಲಿ ಗುರುತಿಸಿಕೊಂಡಿದ್ದ ತುಂಬಾಡಿ ರಾಮಚಂದ್ರಪ್ಪ ಬಿ.ಜೆ.ಪಿ ಸೇರ್ಪಡೆಯಾಗಿರುವುದು ಹಠಾತ್ ಬೆಳವಣಿಗೆಗಳು ಕಾಂಗ್ರೇಸ್ ನಲ್ಲಿದ್ದ ಒಕ್ಕಲಿಗ ಮತಗಳು ಕ್ಷೇತ್ರದಲ್ಲಿ ಬಿ.ಜೆ.ಪಿಯ ಕಡೆಗೆ ವಾಲಬಹುದೆಂದು ಬಿ.ಜೆ.ಪಿಯಲ್ಲಿ ರಾಜಕೀಯ ಲೆಕ್ಕಾಚಾರ ಮಾಡಲಾಗುತ್ತಿದೆ.
ಬಿ.ಜೆ.ಪಿ ಅಭ್ಯರ್ಥಿ ನಿವೃತ್ತ ಐ.ಎ.ಎಸ್ ಅಧಿಕಾರಿ ಅನೀಲ್ ಕುಮಾರ್ ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ದಾಂತವೇ ಮುಖ್ಯ. ಪಕ್ಷದ ಕಾರ್ಯಕರ್ತರಾಗಿ ದೇಶ ಮೊದಲು, ಪಕ್ಷ ನಂತರ ಆಮೇಲೆ ವ್ಯಕ್ತಿ ಎಂಬ ಸಿದ್ದಾಂತವನ್ನು ರೂಢಿಸಿಕೊಂಡಿರುವ ನಾವೆಲ್ಲರೂ, ಪಕ್ಷದ ತಿರ್ಮಾನಕ್ಕೆ ಬದ್ದವಾಗಿ ಒಗ್ಗಟಾಗಿ ಕೆಲಸ ಮಾಡಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸುವುದೇ ನಮ್ಮ ಮುಖ್ಯ ಗುರಿ ಎಂಬುದನ್ನು ಪಣತೊಟ್ಟು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬಿಜೆಪಿ ಗೆ ಸೇರ್ಪಡಯಾದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಹಿರಿಯ ನಾಯಕರು ಆದಂತ ಶ್ರೀಯುತ ರಾಮಚಂದ್ರಪ್ಪ ನವರಿಗೆ ಹೃದಯ ಪೂರ್ವಕ ಸ್ವಾಗತ ಸುಸ್ವಾಗತ ಎಂದು ತಮ್ಮ ಸಾಮಾಜಿಕ ಜಾಲತಾಣದ ಫೇಸ್‌ಬುಕ್ ವಾಲ್ ನಲ್ಲಿ ಬರೆದು ಕೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ತುಸು ಮುಜುಗರವಾಗಿದೆ. ಎನ್ನುವ ಮಾತುಗಳು ಸಾರ್ವಜನಿಕ ಕೇಳಿಬಂದಿವೆ.