ಮಧುಗಿರಿ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿ ಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ಗುಡಿರೊಪ್ಪದ ವಾಸಿ ನವೀನ್ (23) ಎನ್ನುವವನು ಆರೋಪಿಯಾಗಿದ್ದು. ಬಾಲಕಿಯು ಕೊರಟಗೆರೆಯ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದು ಪ್ರತಿ ದಿನ ಶಾಲೆಗೆ ತೆರಳುವಾಗ ಆಕೆಯನ್ನು ಹಿಂಬಾಲಿಸಿ ತನ್ನ ಬಲೆಗೆ ಕೆಡವಿಕೊಂಡಿದ್ದಾನೆ.
ತಾಯಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿರುವ ಮಧುಗಿರಿ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯ ಬಾಲಕಿಯನ್ನು ಬಾಲ ಮಂದಿರಕ್ಕೆ ರವಾನಿಸಲಾಗಿದೆ.