ಪಾವಗಡ: ಪಟ್ಟಣದ ರೆಡ್ಡಿ ಕಾಲೋನಿಯ ಮನೆಗೆ ದಿಢೀರ್ ಎಂದು ಕರಡಿ ಭೇಟಿ ನೀಡಿದ್ದು, ರಾತ್ರಿ ವೇಳೆ ಮನೆ ಬಾಗಿಲಿಗೆ ಬಂದ ಕರಡಿಯನ್ನು ಕಂಡು ಕಂಗಾಲಾಗಿದ್ದಾರೆ.
ಅಪರೂಪಕ್ಕೆ ರೋಡಿಗೆ ಬಂದ ಅತಿಥಿಯನ್ನು ಮಾತನಾಡಿಸಿರುವ ನೆರೆ ಹೊರೆಯವರು ನೇರ ನೆಂಟರ ಮನೆಗೆ ಹೋಗಪ್ಪ, ಜಾಂಬವಂತ ಅಂತ ಕರಡಿಗೆ ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.
ಮನೆಯೊಳಕ್ಕೆ ಹೋಗಲು ಕರಡಿ ಯತ್ನಿಸುತ್ತಿದ್ದಾಗಲೇ, ಎದುರಿಗೆ ಬೈಕ್ ಬಂದಿದ್ದು ಬೆಳಕನ್ನು ನೋಡಿ ಒಂದೆರೆಡು ಹೆಜ್ಜೆ ಮುಂದಕ್ಕೆ ಹಾಕಿದೆ, ಅಷ್ಟರಲ್ಲಿ ಜನರು ಕೂಗಿಕೊಂಡಿದ್ದರಿಂದ ಕರಡಿ ಅಲ್ಲಿಂದ ಕಾಲ್ಕಿತ್ತಿದೆ, ಸದ್ಯ ಯಾರಿಗೂ ಯಾವುದೇ ಅಪಾಯವಾಗಲಿಲ್ಲ ಎನ್ನಲಾಗಿದೆ