ತುಮಕೂರು: ನಟೋರಿಯಸ್ ರೌಡಿಶೀಟರ್ ರೋಹಿತ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಪುಡಿರೌಡಿ ಹಾಗೂ ಇನ್ನೊಂದು ಗ್ಯಾಂಗ್ ನ ಪುಡಿರೌಡಿ ಇಬ್ಬರು ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿರುವ ಪ್ರಕರಣ ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲ್ಲಾಪುರದ ಕುಶಾಲ್ ಬಾರ್ ನಲ್ಲಿ ತಡರಾತ್ರಿವರೆಗೆ ಒಟ್ಟಿಗೆ ಕುಡಿದ ಅಂತರಸನಹಳ್ಳಿಯ ಭರತ್ ಹಾಗೂ ಯಲ್ಲಾಪುರದ ಧನುಶ್ ನಡುವೆ ಜಗಳ ಶುರುವಾಗಿದ್ದು, ಭರತ್ ಬಾಟಲಿನಿಂದ ಧನುಶ್ ಗೆ ಹೊಡೆದಿದ್ದಾನೆ ಎನ್ನಲಾಗಿದ್ದು, ಧನುಶ್ ಕುತ್ತಿಗೆ ಬಳಿ ಗಾಯವಾಗಿದೆ.

ನಂತರ ಧನುಶ್ ಭರತ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ತಲೆ ಮೇಲೆ ಹಾಲೋಬ್ರಿಕ್ಸ್ ಎತ್ತಿಹಾಕಿದ್ದು, ಭರತ್ ಮುಖಕ್ಕೆ ತೀವ್ರವಾಗಿ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದ್ದು, ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಧನುಶ್ ನನ್ನು ಬಂಧಿಸಿದ್ದಾರೆ.

ದಿಲೀಪ್ ಸಹಚರನಾಗಿರುವ ಧನುಶ್ ಕಳೆದ ಎರಡು ದಿನಗಳಿಂದ ಕುಶಾಲ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ರೂಂ ಮಾಡಿಕೊಂಡು ನಾಲ್ಕೈದು ಮಂದಿಯೊಂದಿಗೆ ಪಾರ್ಟಿ ಮಾಡಿದ್ದು, ಜೂಜು ಹಾಗೂ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಭರತ್ ಬಾರ್ ಗೆ ಬಂದಾಗ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದು, ಕುಡಿದ ಮತ್ತಿನಲ್ಲಿ ಭರತ್ ಮೇಲೆ ಧನುಶ್ ಹಾಲೋಬ್ರಿಕ್ಸ್ ಹಾಕಿದ್ದಾನೆ.