ತವರಿಗೆ ಹೋಗಿ ಬರುತ್ತಿದ್ದವರು ಮಸಣಕ್ಕೆ

ಡೆಸ್ಕ್
1 Min Read
ಕೊರಟಗೆರೆ ಗೌರಿಬಿದನೂರು ಮುಖ್ಯರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ

ಕೊರಟಗೆರೆ:- ತವರಿಗೆ ಹೋಗಿ ಬರುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊರಟಗೆರೆ ಗೌರಿಬಿದನೂರು ಮುಖ್ಯರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗೇಟ್ ಸಮೀಪದ ಮುಖ್ಯರಸ್ತೆಯಲ್ಲಿ ಕ್ಯಾಂಟರ್ ಮತ್ತು ಆಟೋ ನಡುವೆ ಮುಖಾಮುಖಿ ಅಪಘಾತವಾಗಿ ಇಬ್ಬರು
ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋ ಚಾಲಕನ
ಜೊತೆಯಲ್ಲಿ ಆತನ ಇಬ್ಬರು ಪುಟಾಣಿ ಮಕ್ಕಳಿಗೆ ಗಂಭೀರ ಗಾಯವಾಗಿವೆ.

ಕೊರಟಗೆರೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ
ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ಅರಸಾಪುರ
ಮತ್ತು ಕಾಶಾಪುರ ಗೇಟ್ ಬಳಿ ಈಗಾಗಲೇ ಅಪಘಾತ ವಲಯ ಎಂದು ಗುರುತಿಸಲಾಗಿದೆ. ಇದೇ ಸ್ಥಳದಲ್ಲಿ ಹತ್ತಾರು ಅಪಘಾತ ನಡೆದಿದ್ದು ತಿರುವಿನಲ್ಲಿ ರಸ್ತೆಉಬ್ಬು ನಿರ್ಮಾಣಕ್ಕೆ ಸ್ಥಳೀಯರು ಆಗ್ರಹ ಮಾಡಿದ್ದಾರೆ.

ಕೊರಟಗೆರೆ ಪಟ್ಟಣದ ವಾಸಿಯಾದ ಮೀಲಾನಿ(25), ಜೈರಾಭಿ(70) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಕಲಂಧರ್(36), ಅರ್ಪ(5), ಅಸೀತಾ(3)ಗೆ ಗಂಭೀರ ಗಾಯಗಳಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತೀದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Share this Article
Verified by MonsterInsights