ಗ್ರಾಮಾಂತರದಲ್ಲಿ ರಾಹುಲ್ ಸಂಚಲನ..!!

ಡೆಸ್ಕ್
1 Min Read

ತುಮಕೂರು: ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವಂತೆಯೇ, ಗ್ರಾಮಾಂತರ ಕ್ಷೇತ್ರದಲ್ಲಿ ಗೌರಿಶಂಕರ್ ಸುಪುತ್ರ ಡಿ.ಜಿ.ರಾಹುಲ್ ಗೌಡ ಸಂಚಲನವನ್ನು ಮೂಡಿಸುತ್ತಿದ್ದಾರೆ.

ದಿ.ಚೆನ್ನಿಗಪ್ಪ ಅವರ ಮೊಮ್ಮಗ, ಶಾಸಕ ಗೌರಿಶಂಕರ್ ಮಗನಾಗಿ ರಾಜಕಾರಣವನ್ನು ರಕ್ತದಲ್ಲಿಯೇ ಪಡೆದುಕೊಂಡಿರುವ ರಾಹುಲ್ ಗೌಡ, ಅಪ್ಪ ಗೌರಿಶಂಕರ್ ಗೆಲುವಿಗಾಗಿ ಹಗಲು ರಾತ್ರಿ ಓಡಾಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಮಾಡುವುದರೊಂದಿಗೆ, ಸಾವು ನೋವುಗಳಲ್ಲಿಯೂ ಭಾಗವಹಿಸಿ, ಕಾರ್ಯಕರ್ತರಿಗೆ ಸ್ಥೈರ್ಯವನ್ನು ತುಂಬುತ್ತಿರುವುದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದು, ವಿರೋಧಿಗಳು ತಬ್ಬಿಬ್ಬಾಗುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಡಿ.ಸಿ.ಗೌರಿಶಂಕರ್ ಅವರಿಗೆ ಮೀರಿದ ವಾಕ್ಚಾತುರ್ಯ, ಸಂಘಟನಾ ಕೌಶಲ್ಯಕ್ಕೆ ವಿರೋಧ ಪಕ್ಷಗಳು ಮುಖಂಡರು ಹಾಗೂ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಯಸ್ಸಿಗೆ ಮೀರಿದ ರಾಜಕಾರಣ ನಡೆ ಜ್ಞಾನಕ್ಕೆ ಗ್ರಾಮಾಂತರದಲ್ಲಿ ಪಕ್ಷಾತೀತವಾಗಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಯುವ ನಾಯಕ: ಗ್ರಾಮಾಂತರ ಕ್ಷೇತ್ರದ ಮನೆಮಗನಾಗಿ ಗುರುತಿಸಿಕೊಂಡಿರುವ ಡಿ.ಸಿ.ಗೌರಿಶಂಕರ್ ಅವರ ಉತ್ತರಾಧಿಕಾರಿಯಾಗಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಕೊಂಡೊಯ್ಯುವ ಶಕ್ತಿ ರಾಹುಲ್ ಗೌಡಗೆ ಇದೆ ಎನ್ನುವ ಅಭಿಪ್ರಾಯವನ್ನು ಜೆಡಿಎಸ್ ಕಾರ್ಯಕರ್ತರು ಮುಕ್ತಕಂಠದಿಂದ ವ್ಯಕ್ತಪಡಿಸಿದ್ದು. ಯುವ ನಾಯಕನಾಗಿ, ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಶಕ್ತಿ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಿರಿಯರೊಂದಿಗೆ ಕಿರಿಯನಾಗಿ, ಕಿರಿಯರೊಂದಿಗೆ ಕಿರಿಯನಾಗಿ ಎಲ್ಲರೊಳಗೆ ಒಂದಾಗಿ ಬೆರೆಯುವ ಗುಣಕ್ಕೆ ಗ್ರಾಮಾಂತರದ ಮತದಾರರು ಫಿದಾ ಆಗಿದ್ದು, ಚುನಾವಣಾ ಪ್ರಚಾರಕ್ಕೆ ಬಂದು ಪ್ರತ್ಯೇಕ ಅಭಿಮಾನಿ ವರ್ಗವನ್ನು ಸೃಷ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Share this Article
Verified by MonsterInsights