ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ, ಮೋದಿ ಅನಿವಾರ್ಯ: ಮಾಜಿ ಸಂಸದ

ಡೆಸ್ಕ್
1 Min Read

ತುಮಕೂರು: ತನ್ನನ್ನು ತಾನು ಸರಿಯಾಗಿ ನೋಡಿಕೊಳ್ಳಲು ಆಗದ ರಾಹುಲ್ ಗಾಂಧಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ತುಮಕೂರು ಗ್ರಾಮಾಂತರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಅಧಿಕಾರ  ಹಿಡಿಯಲು ರಾಹುಲ್ ಯತ್ನಿಸುತ್ತಿದ್ದಾರೆ ಅದು ಎಂದಿಗೂ ಸಾಧ್ಯವಿಲ್ಲ, ದೇಶವನ್ನು ಸುಭದ್ರಗೊಳಿಸಲು ರಾಹುಲ್ ಕೈಯಲ್ಲಿ ಆಗುವುದಿಲ್ಲ, ದೇಶಕ್ಕೆ ಬಿಜೆಪಿ ಮತ್ತು ಮೋದಿ ಅನಿವಾರ್ಯ ಎಂದರು.

ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಟೀಕಿಸುವ ವ್ಯಕ್ತಿಯಿಂದ ದೇಶವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲ, ಭಾರತ ಆರ್ಥಿಕವಾಗಿ ಇಂದು ಬಲಿಷ್ಠವಾಗಲು ನರೇಂದ್ರ ಮೋದಿ ಅವರು ಕಾರಣ ಅವರಿಂದಲೇ ನಮ್ಮ ದೇಶ ಬಲಿಷ್ಠವಾಗಿದೆ ಎಂದರು.

ಹೊನ್ನಾವರ-ಬೆಂಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶೋಭಾ ಕರಂದ್ಲಾಜೆ  ಕಾರಣ, ಈ ಯೋಜನೆಗೆ ಬಿಎಸ್ ವೈ ಅವರು ಬೆಂಬಲ ನೀಡಿದ್ದರಿಂದ ಇಂದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.

ರಾಜ್ಯ ಮತ್ತು ರಾಷ್ಟ್ರದಲ್ಲಿ ಸುಭದ್ರ ಸರ್ಕಾರ ತರಲು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು, ಸುರೇಶ್ ಗೌಡರು ಉತ್ತಮ ಕೆಲಸಗಾರರು, ದೆವ್ವದಂತೆ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ, ಮತ್ತೊಮ್ಮೆ ಗ್ರಾಮಾಂತರದಲ್ಲಿ ಕ್ರಿಯಾಶೀಲರಾಗಿರುವ ಸುರೇಶ್ ಗೌಡರು ಗೆಲ್ಲಬೇಕು ಎಂದು ಕರೆ ನೀಡಿದರು.

Share this Article
Verified by MonsterInsights