ಗುಬ್ಬಿ: ಮೂರು ಎಕರೆಯಲ್ಲಿ ಬೆಳೆದ ರಾಗಿ ಬೆಳೆ ಮಾಂಡೋಸ್ ಮಳೆಯಿಂದ ನೆನೆದು ಸಂಪೂರ್ಣ ನಾಶವಾಗಿದೆ ಎಂದು ರೈತ ಅಳಲು ತೋಡಿರುವ ವಿಡಿಯೋ ವೈರಲ್ ಆಗಿದೆ.
ಗುಬ್ಬಿ ತಾಲ್ಲೂಕಿನ ವಿರುಪಾಕ್ಷಿಪುರ ಸರ್ವೇ ನಂ 38 ರಲ್ಲಿ 3ಎಕರೆ ಜಮೀನಿನಲ್ಲಿ ರಾಗಿ ಬೆಳೆದಿದ್ದು ಕಟಾವು ಮಾಡಿರುತ್ತೇವೆ 3 ದಿನದಿಂದ ಸುರಿಯುತ್ತಿರುವ ಮಳೆ ಯಿಂದಾಗಿ ರಾಗಿ ಸಂಪೂರ್ಣವಾಗಿ ನೆನೆದು ಹೋಗಿದೆ ಎಂದು ಸಂಕಷ್ಟವನ್ನು ತೆರೆದಿಟ್ಟಿದ್ದಾನೆ.
ಸಾಲ ಮಾಡಿ ವ್ಯವಸಾಯ ಮಾಡಿದ್ದೂ ಈಗ ಬೆಳೆಯೆಲ್ಲಾ ನಾಶವಾಗಿದೆ ಸಾಲ ತೀರಿಸಲು ಆಗುತ್ತಿಲ್ಲ ಜೀವನ ಮಾಡಲಿಕ್ಕೂ ತೊಂದರೆ ಆಗಿದೆ 50-60 ವರ್ಷಗಳಿಂದ ನಾವು ಈ ಜಾಗವನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದು ನಮಗೆ ಯಾವುದೇ ದಾಖಲಾತಿಗಳನ್ನು ಮಾಡಿಕೊಡುತ್ತಿಲ್ಲ ಮಂಜೂರು ಮಾಡಿಲ್ಲ ಪರಿಹಾರ ಪಡೆಯಲು ದಾಖಲಾತಿ ಕೇಳುತ್ತಾರೆ ಎಲ್ಲಿಂದ ಕೊಡುವುದು ಎಂದು ಅಸಹಾಯಕ ಪರಿಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ.