ಬಯಲಲ್ಲಿ ಮೇಯುತ್ತಿದ್ದ ಮೇಕೆ ಹೆಬ್ಬಾವಿಗೆ ಬಲಿ

ಡೆಸ್ಕ್
1 Min Read

ಕೊರಟಗೆರೆ: ತಾಲ್ಲೂಕಿನ ಸಿ ಎನ್ ದುರ್ಗ ಹೋಬಳಿಯ ಮಣುವಿನಕುರಿಕೆ ಗ್ರಾಮದಲ್ಲಿ ಮೇಕೆಯೊಂದನ್ನು ಹೆಬ್ಬಾವು ತಿಂದಿರುವ ಘಟನೆ ಭಾನುವಾರ ನಡೆದಿದೆ.

ಮಣುವಿನಕುರಿಕೆ ಗ್ರಾಮದ ವಾಸಿ ನಾಗರಾಜು ದಿನನಿತ್ಯದಂತೆ ಇಂದು ಮೇಕೆ ಮೇಯಿಸಲು ತಮ್ಮ ಮೇಕೆಗಳನ್ನು ಗಿಡದ ಕಡೆ ಹೋದಾಗ ಹೆಬ್ಬಾವೊಂದು ಮೇಕೆಯ ಮೇಲೆ ದಾಳಿ ನಡೆಸಿದೆ.

ನಂತರ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ, ಉರಗ ತಜ್ಞರನ್ನು ಕರೆಯಿಸಿ ಷಡ್ಯೂಲ್ ಒನ್ ಜಾತಿಗೆ ಸೇರಿದ 9 ಅಡಿ ಉದ್ದವಿದ್ದ 30 ವರ್ಷ ವಯಸ್ಸಿನ ಹೆಬ್ಬಾವನ್ನು ಹಿಡಿದು ಕಳುಹಿಸಲಾಗಿದೆ. ಸ್ಥಳಕ್ಕೆ ಬಂದ ಪಶು ಇಲಾಖೆ ಅಧಿಕಾರಿಗಳು ಬಲಿಯಾದ ಮೇಕೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಕೊರಟಗೆರೆ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಈ ರೀತಿಯಾಗಿ ಹೆಬ್ಬಾವು ಬಂದ ಸ್ಥಳಗಳಲ್ಲಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಈಗಾಗಲೇ ತಾಲ್ಲೂಕಿನ ದೊಗ್ಗನಹಳ್ಳಿ ಭಾಗದಲ್ಲಿ ಹಾವು ಸಂರಕ್ಷಣಾ ಸಮಿತಿ ಮತ್ತು ಅರಣ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅರಣ್ಯ ವಲಯಾಧಿಕಾರಿ ಸುರೇಶ್ “ಪ್ರಜಾಕಹಳೆ” ಗೆ ತಿಳಿಸಿದ್ದಾರೆ.

ಹೆಬ್ಬಾವು ಮೇಕೆಯನ್ನು ತಿಂದ ವಿಚಾರ ತಿಳಿದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು.

TAGGED: ,
Share this Article
Verified by MonsterInsights