ಗುಬ್ಬಿ: ಫೆಬ್ರವರಿ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಚ್. ಎ.ಎಲ್ ಘಟಕದ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಗುಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಚ್ ಎ. ಎಲ್ ನಿರ್ಮಾಣ ವಾಗಿ ಮೂರುವರ್ಷ ಆಗಿದೆ ಈಗಾಗಲೇ ಮೂರು ಹೆಲಿಕ್ಯಾಪ್ಟರ್ ಇಲ್ಲಿಂದ ಹಾರಾಟ ನಡೆಸಿದೆ ಈ ನಡುವೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಂತಹ ಎಚ್ಎಎಲ್ ನೌಕರರು ಗುಬ್ಬಿ ತಾಲೂಕಿನ ಎಚ್ಎಎಲ್ ಘಟಕಕ್ಕೆ ವರ್ಗಾವಣೆ ಯಾಗಿ ಬಂದು ಸೇರ್ಪಡೆಗೊಂಡಿದ್ದಾರೆ ಎಂದರು.
ಜಲಜೀವನ್ ಯೋಜನೆ ಅಡಿಯಲ್ಲಿ ಪ್ರತಿಮನೆಗೂ ಶುದ್ಧ ಕುಡಿಯುವ ನೀರಿನ ಯೋಜನೆಯಾಗಿದ್ದು ಕೇಂದ್ರ ರಾಜ್ಯ ಸ್ಥಳೀಯ ಅನುದಾನದ ಮೂಲಕ ಈ ಯೋಜನೆಯನ್ನು ಮಾಡಲಾಗಿದ್ದು ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಸರಿಯಾಗಿ ನಡೆಯದೆ ಇಡೀ ಪಟ್ಟಣದಲ್ಲಿ ಎಲ್ಲಿ ಬೇಕೋ ಅಲ್ಲಿಗೆ ನೀರು ನುಗ್ಗುತ್ತಿದೆ ಹಾಗಾಗಿ ಅದರ ಬಗ್ಗೆ ಸರಿಯಾಗಿ ಯೋಜನೆ ಮಾಡುವ ವರೆಗೂ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. 27 ಕೋಟಿಯಲ್ಲಿ 17 ಕೋಟಿ ಬಿಲ್ ಕೊಟ್ಟಿದ್ದಾರೆ ಮಿಕ್ಕಿದ್ದು ಕೊಟ್ಟಿಲ್ಲ ಸರಿ ಮಾಡಿದ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದರು.
ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಸದಸ್ಯರಾದ ಶಿವಕುಮಾರ್, ಕೃಷ್ಣಮೂರ್ತಿ, ಮಹಮದ್ ಸಾಧಿಕ್, ಶಶಿಕುಮಾರ್, ಬಸವರಾಜು, ಸವಿತಾ ಸುರೇಶ್ ಗೌಡ, ಪ್ರಕಾಶ್, ತಾಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಭೈರಪ್ಪ, ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಎಸ್ ಡಿ ದಿಲೀಪ್ ಕುಮಾರ್, ಪಿ ಬಿ ಚಂದ್ರಶೇಖರ ಬಾಬು, ಎನ್ ಸಿ ಪ್ರಕಾಶ್, ಲಕ್ಷ್ಮಿ ರಂಗಯ್ಯ ಗುತ್ತಿಗೆದಾರ ರಕ್ಷಿತ್, ಪ್ರಭಾಕರ್ ಸೇರಿದಂತೆ ಗ್ರಾಮಪಂಚಾಯತಿ ಅಧ್ಯಕ್ಷರು ಸದಸ್ಯರು ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ಇನ್ನಿತರರು ಹಾಜರಿದ್ದರು.