ಕಲ್ಲೇಟಿನ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಪರಂ.!!!

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಎರಡು ಘಟನೆಗಳು ಡಾ.ಜಿ.ಪರಮೇಶ್ವರ್ ಅವರನ್ನು ಗಟ್ಟಿ ಮಾಡಿದ್ಯ ಎನ್ನುವ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಸಿ ಕಣ್ಣೀರಾಕುವಂತೆ ಮಾಡಿದವರನ್ನು ಸೋಲಿಸಿ ಎಂದು ಕರೆ ನೀಡಿದರು. ಬೈರೇನಹಳ್ಳಿ ಕ್ರಾಸ್ ನಲ್ಲಿ ಪ್ರಚಾರ ಕಾರ್ಯದಲ್ಲಿ ಬಿದ್ದ ಕಲ್ಲೇಟು ಪ್ರಕರಣದ ನಂತರ ಡಾ.ಜಿ.ಪರಮೇಶ್ವರ್ ಅವರು ಇನ್ನಷ್ಟು ರಾಜಕೀಯವಾಗಿ ಗಟ್ಟಿಯಾಗಿದ್ದಾರೆ.

ದೇವೇಗೌಡರು ಚುನಾವಣೆಗೆ ಹಗಲು ರಾತ್ರಿ ಪರಮೇಶ್ವರ್ ಅವರು ಅವರನ್ನು ಗೆಲ್ಲಿಸಲು ಹೋರಾಟ ಮಾಡಿದರು ಸಹ ಅವರನ್ನು ಸೋಲಿಸಿ ಎಂದು ದೇವೇಗೌಡರು ಕರೆ ನೀಡಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಕೆ.ಎನ್.ರಾಜಣ್ಣ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದು.

ಪರಮೇಶ್ವರ್ ಮೇಲೆ ರಾಜಕೀಯ ವಿರೋಧಿಗಳ ದಾಳಿ ಖಂಡನೀಯ, ಪರಮೇಶ್ವರ್ ಗೆಲುವು ನಿಶ್ಚಿತ, ಪರಮೇಶ್ವರ್ ಗೆ ಗೆದ್ದರೆ ನನ್ನಷ್ಟು ಸಂತೋಷ ಪಡುವವನು ಯಾರು ಇಲ್ಲ ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ಕೊರಟಗೆರೆಯಲ್ಲಿಯೇ ಕರೆ ನೀಡಿದ್ದು ಪರಂ ವಿಶ್ವಾಸವನ್ನು ಹೆಚ್ಚಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಲ್ಲೇಟಿನ ಪ್ರಕರಣದ ನಂತರ ಪರಮೇಶ್ವರ್ ನಡೆದುಕೊಂಡ ರೀತಿ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ, ಶಾಂತಿಯುತ ಕೊರಟಗೆರೆಗೆ ಶಾಂತಿಯುತವಾಗಿ ಮತದಾನ ನಡೆಯಬೇಕು, ಕಾರ್ಯಕರ್ತರು, ಮುಖಂಡರು ಉದ್ರೇಕಕ್ಕೆ ಒಳಗಾಗದೇ ಶಾಂತತೆ ಕಾಪಾಡಬೇಕೆಂಬ ಸಂದೇಶ, ಪ್ರಬುದ್ಧ ರಾಜಕೀಯ ನಡೆ, ಅನ್ಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವೆಲ್ಲ ಪ್ರಕರಣಗಳ ನಂತರ ಪರಮೇಶ್ವರ್ ಇನ್ನಷ್ಟು ಗಟ್ಟಿಯಾಗಿದ್ದು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ, ತಲೆಗೆ ಬ್ಯಾಡೇಂಜ್ ಕಟ್ಟಿಕೊಂಡೇ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ, ಬಿಜೆಪಿಯನ್ನು ಕಟ್ಟಿದ್ದ ತಿಮ್ಮಜ್ಜ ಸೇರಿದಂತೆ ಅನೇಕರು ಪರಮೇಶ್ವರ್ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷಾತೀತವಾಗಿ ಜನರು ತೋರುತ್ತಿರುವ ಪ್ರೀತಿ ಮತ್ತು ಬೆಂಬಲ ಡಾ.ಜಿ.ಪರಮೇಶ್ವರ್ ಅವರು ಗಟ್ಟಿಯಾಗುವಂತೆ ಮಾಡಿದೆ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

Verified by MonsterInsights