ದೇವೇಗೌಡರನ್ನು ಸೋಲಿಸಿ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ
ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಸೋಲಿಗೆ ಪ್ರಮುಖ ಕಾರಣರಾಗಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ದೇವೇಗೌಡರ ತವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ನನ್ನ ಸೋಲಿಗೆ ಕಾರಣವಾದವರನ್ನು ಸೋಲಿಸಿ ಎಂದು ಮಧುಗಿರಿ…
ಮುಖ್ಯಮಂತ್ರಿ ಆಗಲಿಲ್ಲ ಎಂದು ನಿರಾಶರಾಗಬೇಡಿ: ಡಿಕೆಶಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿಯನ್ನು ಕೊಡಿಸಲು ಸಫಲವಾಗಿದ್ದ ಡಿ.ಕೆ.ಶಿವಕುಮಾರ್ ಶತಾಯಗತಾಯ ಮುಖ್ಯಮಂತ್ರಿ ಆಗಬೇಕೆಂದು ಹಠ ಹಿಡಿದು ಕೊನೆಗೆ ಉಪಮುಖ್ಯಮಂತ್ರಿ ಸ್ಥಾನವನ್ನುಒಪ್ಪಿಕೊಂಡಿದ್ದರು, ಈಗ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದ್ದ ಮತದಾರರಿಗೆ ಧನ್ಯವಾದ…
ಅಡಿಕೆ ದರ ಜಿಗಿತ, ಬೆಳೆಗಾರರಿಗೆ ಬಂಪರ್ ನಿರೀಕ್ಷೆ
ಇಳಿಕೆಯಾಗಿದ್ದ ಅಡಿಕೆ ಬೆಲೆ ಜೂನ್ ಮೊದಲ ವಾರದಲ್ಲಿ ಏರಿಕೆಯತ್ತ ಸಾಗಿದ್ದು 50 ಸಾವಿರದ ಗಡಿ ದಾಟಿ ಮಾರಾಟವಾಗಿದೆ. ವಿಧಾನಸಭೆ ಚುನಾವಣೆಗೆ ಒಂದೆರಡು ತಿಂಗಳು ಬಾಕಿ ಇರುವಾಗ ಅಡಿಕೆ ದರ ಇಳಿಕೆಯತ್ತ ಸಾಗಿತ್ತು. ತೀವ್ರ ಕುಸಿತ ಕಂಡ ರಾಶಿ ಅಡಿಕೆ ಕ್ವಿಂಟಾಲ್ ಗೆ…
ಪ್ರಿಯತಮನಿಂದಲೇ ಪ್ರಿಯಕರನ ಕೊಲೆ ಮಾಡಿಸಿದ ಪ್ರಿಯತಮೆ!!
ತುಮಕೂರು: ಯಲ್ಲಾಪುರದಲ್ಲಿನ ಟೈಲ್ಸ್ ಅಂಗಡಿ ಮಾಲೀಕನ ಕೊಲೆ ಪ್ರಕರಣವನ್ನು ಬೇಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಿಯತಮನಿಂದಲೇ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಮೇ.20ರಂದು ರಾತ್ರಿ ಟೈಲ್ಸ್ ಅಂಗಡಿಯಲ್ಲಿದ್ದ ಚಿಕ್ಕಮಗಳೂರು ಮೂಲದ ಝಾಕೀರ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ…
ಲೋಕಸಭೆಗೆ ಸೋಮಣ್ಣ ಬರ್ತಾರೆ: ಜಿಎಸ್ಬಿ
ತುಮಕೂರು: ನನಗೆ 85 ವರ್ಷ ಆಯ್ತು ನಾನು ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ದೆಹಲಿಯಲ್ಲಿಯೇ ಹೇಳಿದ್ದೇನೆ, ನನ್ನ ಬದಲಿಗೆ ಸೋಮಣ್ಣ ಬರ್ತಾರೆ, ಅವರನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಂಸದ ಜಿ.ಎಸ್.ಬಸವರಾಜು ಸಲಹೆ ನೀಡಿದರು. ವೀರಶೈವ-ಲಿಂಗಾಯತರು ಹೀಗೆ ಕಿತ್ತಾಡ್ಕೊಂಡ್ರೆ ಊರಿಂದ ಹೋಡಿಸುತ್ತಾರೆ, ಇರೋ ಜಾಗವನ್ನು…
ಮದ್ವೆಯಾಗದೇ ಗರ್ಭೀಣಿಯಾದ ಟಾಪ್ ಹೀರೋಯಿನ್..!
ಸೌತ್ ಇಂಡಿಯನ್ ಸಿನಿಮಾದ ಟಾಪ್ ಹೀರೋಯಿನ್ ಗೋವಾ ಬ್ಯೂಟಿ ಇಲಿಯಾನ ಮದ್ವೆಯಾಗದೇ ಗರ್ಭೀಣಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಗರ್ಭೀಣಿ ಅನ್ನೋದನ್ನ ಇನ್ ಸ್ಟಾದಲ್ಲಿ ಅನೌನ್ಸ್ ಮಾಡಿದ್ದ ಝೀರೋ ಸೈಜ್ ಸುಂದರಿ, ಬೇಬಿ ಬಂಪ್ಸ್ ಪೋಸ್ಟ್ ಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಿರುವುದು ಇನ್…
ಅಪಘಾತ: ವಿಪ್ರೋ ಉದ್ಯೋಗಿ ಸಾವು
ತುಮಕೂರು: ಲಾರಿ ಮತ್ತು ಬೈಕ್ ಅಪಘಾತದಲ್ಲಿ ಖಾಸಗಿ ಕಾರ್ಖಾನೆ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ತುಮಕೂರು ಹೊರವಲಯದ ಗೂಳೂರಿನಲ್ಲಿ ನಡೆದಿದೆ. ಹೆಬ್ಬೂರು ಹೋಬಳಿ ಕಾಳಿಂಗಯ್ಯನ ಪಾಳ್ಯದ ಯೋಗೀಶ್ (34) ವರ್ಷ ಸಾವನ್ನಪ್ಪಿದ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಮೃತ ಯೋಗೀಶ್ ಅಂತರಸನಹಳ್ಳಿಯ…
11ರಿಂದಲೇ ಶಕ್ತಿ, ಆಗಸ್ಟ್ ನಿಂದ ಗೃಹಲಕ್ಷ್ಮೀ, ಗೃಹ ಜ್ಯೋತಿ ಗ್ಯಾರೆಂಟಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಿಂದಲೇ ಜಾರಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಧರ್ಮ, ಜಾತಿ ಸೇರಿದಂತೆ…
ಚುನಾವಣಾ ಅಕ್ರಮ ಎಸಗಿದ ಡಾ.ರಂಗನಾಥ್ ಅನರ್ಹತೆ ಖಚಿತ: ಕೆ.ಎಸ್.ನವೀನ್
ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ನಕಲಿ ಗಿಫ್ಟ್ ಕಾರ್ಡ್ ಕಾರಣ, ಮತದಾರರಿಗೆ ನಕಲಿ ಕಾರ್ಡ್ ಹಂಚಿ ಗೆಲುವು ಸಾಧಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕ್ರಮದಿಂದ ಕಾಂಗ್ರಸ್ ಗೆಲುವು ಸಾಧಿಸಿರುವುದರ ವಿರುದ್ಧ…
ಷೇರು ನಂಬಿದ್ದಕ್ಕೆ 14 ಲಕ್ಷಕ್ಕೆ ಪಂಗನಾಮ.!!
ಮೊಬೈಲ್ ಆಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚುವರಿ ಹಣ ಮಾಡಲು ಹೋದ ವ್ಯಕ್ತಿಗೆ 14 ಲಕ್ಷಕ್ಕೆ ಪಂಗನಾಮ ಹಾಕಿರುವ ಪ್ರಕರಣ ತುಮಕೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತುಮಕೂರು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ವಾಸವಾಗಿರುವ ವ್ಯಕ್ತಿ ಮೊಬೈಲ್…