ಒಕ್ಕಲಿಗ ಶಾಸಕರ ವಿರುದ್ಧ ಆಕ್ರೋಶ

ಡೆಸ್ಕ್
1 Min Read

ತುಮಕೂರು: 10 ವರ್ಷಗಳ ಹಿಂದೆ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ವೇಳೆ ಬಾಲಗಂಗಾಧರ ನಾಥ ಸ್ವಾಮೀಜಿ ಮುಂದೆ ಗಲಾಟೆ ಮಾಡಿದ್ದರು, ಸ್ವಾಮೀಜಿ ಅನಾರೋಗ್ಯದ ಮಧ್ಯೆ ಬಂದಿದ್ದರು, ಅವರ ಮುಂದೆ ಗಲಾಟೆ ನಡೆಯಿತು, ಯಾಕೆ ಮಾಡಿದ್ರೀ ಅಂತ ಕೇಳಲ್ಲ, ನಮ್ಮ ಸಮುದಾಯದವರು, ಸಮುದಾಯದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಜಗಳವಾಡುವುದು ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಯದಾಯದಲ್ಲಿ ಸಂಸ್ಕೃತಿ ಇರಬೇಕು, ಏನಾದರೂ ಅಸಮಾಧಾನಗಳಿದ್ದರೆ ಕುಳಿತು ಮಾತನಾಡಬೇಕು, ಸಲಹೆಗಳನ್ನು ನೀಡಬೇಕು ಅದನ್ನು ನಿಮ್ಮಲ್ಲಿ ನೀವೆ ಮಾತನಾಡಿಕೊಳ್ಳುವುದು, ಸಭೆ ಸಮಾರಂಭಗಳಲ್ಲಿ ಗೊಂದಲ ಮೂಡಿಸುವುದು ಸರಿಯೇ ಎಂದು ಸ್ವಾಮೀಜಿ ಗರಂ ಆದರು.

ಒಕ್ಕಲಿಗ ಸಂಘದ ಉಚಿತ ವಿದ್ಯಾರ್ಥಿ ನಿಲಯ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲೆಯಲ್ಲಿರುವ ಆರು ಒಕ್ಕಲಿಗ ಶಾಸಕರು ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆ ಒಕ್ಕಲಿಗ ಸಮುದಾಯವಿದೆ, ಸಮುದಾಯದ ಆರು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಓರ್ವ ಶಾಸಕರು ಭಾಗಿಯಾಗಿಲ್ಲವೆಂದರೆ ಹೇಗೆ? ಎಂದು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಕ್ಕಲಿಗ ಸಮುದಾಯವನ್ನು ಬರೀ ಮತದಾರರನ್ನಾಗಿ ಮಾಡಿಕೊಂಡಿದ್ದಾರೆ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಇದ್ದರೆ ಹೇಗೆ? ಇಂತವರಿಗೆ ಸ್ವಾಮೀಜಿಗಳು ಬುದ್ಧಿ ಹೇಳಬೇಕು ಎಂದು ಉದ್ಯಮಿ ಚಂದ್ರಶೇಖರ್ ಸಭೆಯಲ್ಲಿ ಮನವಿ ಮಾಡಿದರು.

ಒಕ್ಕಲಿಗ ಸಮುದಾಯದ ಶಾಸಕರು ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೆ ಬೇಡ ಇನ್ಮುಂದೆ ಎಲ್ಲ ಕಾರ್ಯಕ್ರಗಳಲ್ಲಿಯೂ ಅವರನ್ನು ಕರೆಯಲು ಬೇಡಿ, ಅವರ ಹೆಸರನ್ನು ಹಾಕಿಸಬೇಡಿ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಆಕ್ರೋಶ ವ್ಯಕ್ತಪಡಿಸಿದರು.

ನಿಕಟಪೂರ್ವ ಒಕ್ಕಲಿಗ ಸಂಘದ ಸದಸ್ಯರನ್ನು ಕಾರ್ಯಕ್ರಮಕ್ಕೆ ಕರೆದಿಲ್ಲ, ಕನಿಷ್ಠ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಸಂಘದ ನಿರ್ದೇಶಕರು ಮಾಡಿಲ್ಲ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಮುಂದೆಯೇ ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

Share this Article
Verified by MonsterInsights