ಅಡಿಕೆ ದರ ಜಿಗಿತ, ಬೆಳೆಗಾರರಿಗೆ ಬಂಪರ್ ನಿರೀಕ್ಷೆ

ಇಳಿಕೆಯಾಗಿದ್ದ ಅಡಿಕೆ ಬೆಲೆ ಜೂನ್ ಮೊದಲ ವಾರದಲ್ಲಿ ಏರಿಕೆಯತ್ತ ಸಾಗಿದ್ದು 50 ಸಾವಿರದ ಗಡಿ ದಾಟಿ ಮಾರಾಟವಾಗಿದೆ.

ವಿಧಾನಸಭೆ ಚುನಾವಣೆಗೆ ಒಂದೆರಡು ತಿಂಗಳು ಬಾಕಿ ಇರುವಾಗ ಅಡಿಕೆ ದರ ಇಳಿಕೆಯತ್ತ ಸಾಗಿತ್ತು. ತೀವ್ರ ಕುಸಿತ ಕಂಡ ರಾಶಿ ಅಡಿಕೆ ಕ್ವಿಂಟಾಲ್ ಗೆ 42,000 ರೂ.ನಿಂದ 44,000 ರೂ.ವರೆಗೆ ಕುಸಿತ ಕಂಡಿತ್ತು.

ಈ ಬಾರಿ ಖೇಣಿಗೆ ಒಂದೆರಡು ತಿಂಗಳು ಬಾಕಿ ಇರುವಾಗ ಅಡಿಕೆ ದರ ಏರಿಕೆ ಕಂಡಿದೆ. ಶಿವಮೊಗ್ಗೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಕ್ವಿಂಟಾಲ್ ಗೆ 48,000 ರೂ.ನಿಂದ 50,010 ರೂಪಾಯಿ ದರ ಇದೆ. ಗ್ರಾಮೀಣ ವ್ಯಾಪಾರಸ್ಥರು ಹೆಚ್ಚುವರಿಯಾಗಿ 800 ರಿಂದ 1000 ರೂ. ಜಾಸ್ತಿ ನೀಡಿ ಅಡಿಕೆ ಖರೀದಿಗೆ ಮುಂದಾಗುತ್ತಿದ್ದು, ಹೆಚ್ಚಿನ ಬೆಳೆಗಾರರ ಬಳಿ ಅಡಿಕೆ ದಾಸ್ತಾನು ಇಲ್ಲವಾಗಿದೆ. ಈಗಾಗಲೇ ಬಹುತೇಕ ರೈತರು ಅಡಿಕೆ ಮಾರಾಟ ಮಾಡಿದ್ದಾರೆ.

 

Verified by MonsterInsights