ಕೊರಟಗೆರೆಯಲ್ಲಿ ಧ್ವಜ ಸಂಹಿತೆ ಉಲ್ಲಂಘಿಸಿದ ಅಧಿಕಾರಿಗಳು

ಡೆಸ್ಕ್
1 Min Read
ಕೊರಟಗೆರೆ: ಪಟ್ಟಣದಲ್ಲಿರುವ ವಿವಿಧ ಇಲಾಖೆಗಳು ಒಂದೇ ಧ್ವಜ ಸ್ತಂಭ ದಲ್ಲಿ ರಾಷ್ಟ್ರ ಮತ್ತು ನಾಡ ಧ್ವಜಗಳನ್ನು ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ.
ಪಟ್ಟಣದಲ್ಳಿರುವ ತಾಲ್ಲೂಕು ಮಟ್ಟದ ಕಛೇರಿಗಳ ನವೆಂಬರ್ ೦೧ ರಂದು ರಾಜ್ಯದಲ್ಲಿ ಕನ್ನಡ  ರಾಜ್ಯೋತ್ಸವ ಆಚರಣೆ ಮಾಡುವ ಸಲುವಾಗಿ ತಾಲ್ಲೂಕು ಪಂಚಾಯತಿ, ಕೃಷಿ ಇಲಾಖೆ, ಉಪನೊಂದಣಾಧಿಕಾರಿ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ಇದೇ ರೀತಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.

ರಾಷ್ಟ್ರಧ್ವಜವನ್ನು ಇತರೆ ಧ್ವಜಗಳೊಂದಿಗೆ ಅಥವಾ ಒಂದೇ ಧ್ವಜಸ್ತಂಭದೊಂದಿಗೆ ಹಾರಿಸಬಾರದೆಂಬ ಸ್ಪಷ್ಟ ನಿಯಮಗಳು ಇದ್ದರು ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿರುವ ರಾಷ್ಟ್ರೀಯ ಹಬ್ಬಗಳ ತಾಲ್ಲೂಕು ಅಧ್ಯಕ್ಷರು ಇಂತಹ ಘಟನೆಗಳು ನಡೆದ ಇಲಾಖೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.

ತಾಲ್ಲೂಕು ಮಟ್ಟದ ಅಧಿಕಾರಿಗಳು ಇಂತಹ ದಿನಾಚರಣೆಗಳನ್ನು ನೆಪ ಮಾತ್ರಕ್ಕೆ ಮಾಡುತ್ತಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಇನ್ನು ಇಂತಹ ಘಟನೆಗಳನ್ನು ಕನ್ನಡ ಪರ ಸಂಘಟನೆಗಳು ಸಹ ಗಮನಹರಿಸಿ  ಧ್ವಜ ಗಳಿಗೆ ಅಪಮಾನವಾಗದಂತೆ ಕ್ರಮವಹಿಸಬೇಕಿತ್ತು. ಆದರೆ ಕನ್ನಡಪರ ಹೋರಾಟಗಾರರು ಅದನ್ನೆಲ್ಲ ಗಮನಿಸದೇ ಇರುವುದು ವಿಪರ್ಯಾಸವಾಗಿದೆ.

Share this Article
Verified by MonsterInsights