ಗಣಪತಿ ಮೆರವಣಿಗೆಯಲ್ಲಿ ಜ್ಯೂಸ್ ನೀಡಿದ ಮುಸ್ಲಿಂ ಮುಖಂಡರು

ತುಮಕೂರು: ಸದಾಶಿವ ನಗರದಲ್ಲಿ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಈ ಏರಿಯಾದ ಹಿಂದೂ ಮುಸ್ಲಿಂ ಭಾಂದವರು ಅದ್ದೂರಿಯಾಗಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗಿ ಭಾವೈಕ್ಯತೆ ಹಬ್ಬ ಆಚರಣೆ ಮಾಡಿದರು ಇದೇ ವೇಳೆ ಗಣೇಶೋತ್ಸವ ಮೆರವಣಿಗೆ ವೇಳೆ ನಜರಾಬಾದಿನ ಮುಸ್ಲಿಂ ಮುಖಂಡ ಶಬ್ಬೀರ್ ಅಭಿಮಾನಿ ಬಳಗದ ವತಿಯಿಂದ ನೆರೆದ ಹಿಂದೂ ಭಾಂದವರಿಗೆ ನೀರು, ಜ್ಯೂಸ್ ವಿತರಿಸಿ  ಹೂವಿನ ಸುರಿಮಳೆ ಗೈದು ಸ್ವಾಗತಿಸಿದರು.

ಇದೇ ವೇಳೆ ಈ ಭಾಗದ ಹಿರಿಯ ನಾಗರೀಕರಾದ ಗುಂಡಣ್ಣ ಅವರು ಮಾತನಾಡಿ ಸದಾಶಿವನಗರದಲ್ಲಿ 35ನೇ ವರ್ಷದ ವಿದ್ಯಾಗಣಪತಿ ಸೇವಾ ಟ್ರಸ್ಟ್ ನ ಗಣೇಶೋತ್ಸವ ಸುಮಾರು 80 ವರ್ಷದಿಂದ ಈ ಭಾಗದಲ್ಲಿ ಹಿಂದು ಮುಸ್ಲಿಂ ಸಮುದಾಯದವರು ಅಣ್ಣಾ ತಮ್ಮಂದಿರಂತೆ ಭಾವೈಕ್ಯತೆಯಿಂದ ಒಟ್ಟಾಗಿ ಗಣಪತಿ ಉತ್ಸವ ನಡೆಸುತ್ತಿದ್ದು ಅದೇ ರೀತಿಯಾಗಿ ಎಲ್ಲಾ ರೀತಿಯ ಹಬ್ಬಗಳನ್ನು ಆಚರಿಸುತ್ತೇವೆ ಎಂದರು.

ಇದೇ ವೇಳೆ ಗಣಪತಿ ಸೇವಾಶ್ರಯ ಅಧ್ಯಕ್ಷ ನರಸಿಂಹಮೂರ್ತಿಯವರು ಮಾತನಾಡಿ ಸದಾಶಿವ ನಗರದಲ್ಲಿ 35ನೇ ವರ್ಷದ ಗಣೇಶೋತ್ಸವವನ್ನು ಆಚರಣೆ ಮಾಡುತ್ತಿದ್ದು ಈ ಸಂದರ್ಭದಲ್ಲಿ ಅಂದಿನಿಂದಲೂ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಣ್ಣ ತಮ್ಮಂದಿರಂತೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಹಬ್ಬ ಆಚರಣೆಗಳನ್ನು ಮಾಡುತ್ತಿದ್ದೇವೆ ಎಂದರು.

ಗಣೇಶೋತ್ಸವದಲ್ಲಿ ಮುಸ್ಲಿಂ ಮುಖಂಡ ಮುಬಾರಕ್ ಪಾಷಾ ಮಾತನಾಡಿ ಗಣಪತಿ ಉತ್ಸವದಲ್ಲಿ ನಜರಾಬಾದ್ ಮುಸ್ಲಿಂ ಸಮುದಾಯದ ಶಬೀರ್ ಅವರ ತಂಡ ಪ್ರತಿ ವರ್ಷ ಗಣೇಶೋತ್ಸವದಲ್ಲಿ ಭಾಗಿಯಾಗಿ ಸಂಭ್ರಮ ಪಡುತ್ತಿದ್ದು ಅದೇ ರೀತಿಯಾಗಿ ಇದೀಗ ಬಂದಿರುವ ಈದ್ ಮೀಲಾದ್ ಹಬ್ಬಕ್ಕೂ ಹಿಂದೂ ಬಾಂಧವರು ಶುಭಕೋರಿದು ನಾವು ಕೂಡ ಗಣೇಶೋತ್ಸವದಲ್ಲಿ ಭಾಗಿಯಾಗಿ ಭಾವೈಕ್ಯತೆಯಿಂದ ಬದುಕುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತರಾಜು, ಹನುಮೇಗೌಡ, ಶಿವಕುಮಾರ್, ಮಹದೇವ್, ಲೋಕೇಶ್ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಶಫಿ, ವಾಲಿಬಾ, ಮುಜಾಹಿದ್, ಅನ್ನೂ, ಅಬ್ದುಲ್, ಸುಹೆಲ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

 

Verified by MonsterInsights