ತುಮಕೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ರಿಪೀಸ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೆಬ್ಬೂರು ಠಾಣೆಯಲ್ಲಿ ದಾಖಲಾಗಿದೆ.
ಹೆಬ್ಬೂರು ಹೋಬಳಿಯ ಕುಂಬಿಪಾಳ್ಯದ ವಸೀಂ ಅಕ್ರಮ ಖಾನ್ (33) ಕೊಲೆಯಾದ ದುರ್ದೈವಿ, ಸ್ಕೂಟರ್ ಮೆಕಾನಿಕ್ ಆಗಿದ್ದ ವಸೀಂ ಹಾಗೂ ಇಕ್ರಂ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ.
ಈ ವೇಳೆ ವಸೀಂ ಲಾಂಗ್ ನಿಂದ ಇಕ್ರಂ ಮೇಲೆ ಹಲ್ಲೆ ನಡೆಸಿದ್ದಾನೆ. ಇಕ್ರಂ ಮರದ ರಿಪೀಸ್ ನಿಂದ ವಸೀಂ ತಲೆಗೆ ಬಲವಾಗಿ ಹೊಡೆದಿದ್ದು ಗಾಯಗೊಂಡಿದ್ದ ವಸೀಂನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಹೆಬ್ಬೂರು ಇನ್ ಸ್ಪೆಕ್ಟರ್ ಬೈರೇಗೌಡ ನೇತೃತ್ವದಲ್ಲಿ ಪೊಲೀಸರು ಆರೋಪಿ ಇಕ್ರಂನನ್ನು ಬಂಧಿಸಿ ಸ್ಥಳ ಮಹಜರು ಮಾಡಿದ್ದು, ವಿಚಾರಣೆ ಕೈಗೊಂಡಿದ್ದಾರೆ..