ಇಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ತಾಯಿ ಆತ್ಮಹತ್ಯೆ

ಡೆಸ್ಕ್
1 Min Read

ಗುಬ್ಬಿ: ಹನ್ನೊಂದು ತಿಂಗಳ ಮಗು, 4 ವರ್ಷದ ಮಗನೊಂದಿಗೆ ಗೃಹಿಣಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ನಿಟ್ಟೂರಿನ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ, ಕಳೆದ ಒಂದು ತಿಂಗಳ ಹಿಂದೆ ವಿಜಯಲಕ್ಷ್ಮೀ ಅವರ ಪತಿ ನವೀನ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು,

ಪತಿ ಸಾವಿನಿಂದ ಕಂಗೆಟ್ಟಿದ್ದ ವಿಜಯಲಕ್ಷ್ಮೀ ಇಂದು ತನ್ನ ಹನ್ನೊಂದು ತಿಂಗಳ ಮಗು ಹಾಗೂ 4 ವರ್ಷದ ಮಗನೊಂದಿಗೆ ನಿಟ್ಟೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವಿಜಯಲಕ್ಷ್ಮಿ ಹಾಗೂ 11 ತಿಂಗಳ ಮಗುವಿನ ದೇಹ ಸಿಕ್ಕಿದ್ದು, 4 ವರ್ಷದ ಬಾಲಕನ ದೇಹ ಪತ್ತೆಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ

ಘಟನಾ ಸ್ಥಳಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ. ಚಂದ್ರಶೇಖರ್ ಬಾಬು ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಗೋಪಿನಾಥ್ ಹಾಗೂ ಸಬ್ ಇನ್ಸ್ ಪೆಕ್ಟರ್ ದೇವಿಕಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Article
Verified by MonsterInsights