ಕೈ ಮುಗಿತ್ತೀನಿ ಸುಮ್ನೀರಿ ಎಂದ ಶಾಸಕ ಜ್ಯೋತಿಗಣೇಶ್

ಡೆಸ್ಕ್
2 Min Read

ತುಮಕೂರು: ಕೈ ಮುಗಿದು ಕೇಳಿಕೊಳ್ಳುತ್ತೇನೆ, ಉದ್ಘಾಟನೆ ವೇಳೆ ಗೊಂದಲ ಮಾಡಬೇಡಿ ಎಂದು ಕನ್ನಡ ಪರ ಹೋರಾಟಗಾರರನ್ನು ಶಾಸಕ ಜ್ಯೋತಿಗಣೇಶ್ ವಿನಂತಿಸಿದರು.

ನಗರದ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಕಸಾಪ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರ ಸಂಘಟನೆಗಳನ್ನು ಕಡೆಗಣಿಸಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಿರುವುದಕ್ಕೆ ಕನ್ನಡ ಪರ ಸಂಘಟನೆಗಳ ಮುಖಂಡರು ವೇದಿಕೆ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು.

ಟೂಡಾ ಅಧ್ಯಕ್ಷರಾಗಿರುವವರು ಕನ್ನಡಕ್ಕಾಗಿ ಏನು ಕೊಡುಗೆ ನೀಡಿದ್ದಾರೆ, ಅವರನ್ನು ಕರೆಯಲು ಆಗುತ್ತದೆ, ಕನ್ನಡ ಪರ ಸಂಘಟನೆಗಳನ್ನು ಕರೆಯಲು ಆಗುವುದಿಲ್ಲವೇ ಎಂದು ಆಯೋಜಕರನ್ನು ಕನ್ನಡ ಪರ ಸಂಘಟನೆ ಮುಖಂಡ ಶಂಕರ್ ತರಾಟೆಗೆ ತೆಗೆದು ಕೊಂಡರು.

ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ನಗರದಲ್ಲಿ ಕನ್ನಡ ಭಾವುಟ ಕಟ್ಟುವ ಯೋಗ್ಯತೆ ಇಲ್ಲವೇ? ಕನ್ನಡಕ್ಕಾಗಿ ಹೋರಾಟ ಮಾಡುವವರನ್ನು ಬದಿಗಿಟ್ಟು ಹೋರಾಟರಿಗೆ ಮಾಹಿತಿ ಇಲ್ಲದಂತೆಯೇ ಸಮ್ಮೇಳನ ಆಯೋಜನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಧಾನ ಪಡಿಸಿದ ಜಿಲ್ಲಾಧಿಕಾರಿ: ಸಮ್ಮೇಳನಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವಪಡಿಸಿದ ನಂತರ ಹೋರಾಟಗಾರ ಬಳಿ ಆಗಮಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಶಾಸಕ ಜ್ಯೋತಿಗಣೇಶ್  ಅವರು ಹೋರಾಟಗಾರರ ಅಹವಾಲನ್ನು ಆಲಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರು.

ಹೋರಾಟಗಾರರ ಅಸಮಾಧಾನವನ್ನು ತಿಳಿಸಲು ಪ್ರಯತ್ನಿಸಿದಾಗ ಶಾಸಕ ಜ್ಯೋತಿಗಣೇಶ್ ಅವರು ಕೈ ಮುಗಿದು ವಿನಂತಿಸಿ ನಂತರ ಹೋರಾಟಗಾರರಿಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಯಿತು.

ಜಯಕರ್ನಾಟಕ ಸಂಘಟನೆಯ ಅರುಣ್, ಕನ್ನಡ ರಕ್ಷಣಾ ವೇದಿಕೆಯ ಮಂಜುನಾಥ್, ದಲಿತ ಸಂಘಟನೆಗಳ ಮುಖಂಡರಾದ ಆಟೋ ಶಿವರಾಜು, ಪಿ.ಎನ್.ರಾಮಯ್ಯ ಸೇರಿದಂತೆ ಇತರರಿದ್ದರು.

14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 14ನೇ ಕನ್ನಡ ಸಾಹಿತ್ಯ  ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಶಾಸಕ ಜ್ಯೋತಿಗಣೇಶ್ ಕನ್ನಡ  ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಎಸ್.ಜಿ.ಸಿದ್ದರಾಮಯ್ಯನವರು 14ನೇ ಸಮ್ಮೇಳನಾಧ್ಯಕ್ಷರಾದ ಎಂ.ವಿ.ನಾಗರಾಜರಾವ್ ಅವರಿಗೆ ಧ್ವಜವನ್ನು ಹಸ್ತಾಂತರಿಸಿದ ನಂತರ ಟೌನ್ ಹಾಲ್ ನಿಂದ ಗಾಜಿನ ಮನೆಯವರೆಗೆ ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಹಂಪನಾಗರಾಜಯ್ಯ, ಸಿದ್ದರಾಮಯ್ಯ, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ,ಟೂಡಾ ಅಧ್ಯಕ್ಷ ಚಂದ್ರಶೇಖರ್, ಸ್ಫೂರ್ತಿ ಫೌಂಡೇಶನ್ ನ ಚಿದಾನಂದ್ ಸೇರಿದಂತೆ ಇತರರಿದ್ದರು.

Share this Article
Verified by MonsterInsights