ತುಮಕೂರು: ಸೊಗಡು ತುಮಕೂರಿಗೆ ಟೈಗರ್ ತರ, ಮಾಧುಸ್ವಾಮಿ ಶಿಸ್ತಿನ ಸಚಿವರು, ಅವರಿಂದಲೇ ಜಿಲ್ಲೆಯಲ್ಲಿ ಉತ್ತಮ ಕೆಲಸ ಆಗಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂರ್ ಬ್ಯಾಟಿಂಗ್ ಮಾಡಿದರು.
ರುಪ್ಸಾ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಮತ್ತು ಶಿಕ್ಷಣ ಭೀಷ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ನಮ್ಮ ಜಿಲ್ಲೆಯವರು, ಸಚಿವರು ನಿಮ್ಮ ಮನವಿ ಸ್ವೀಕರಿಸಿ, ಕ್ಯಾಬಿನೆಟ್ ನಲ್ಲಿಟ್ಟು ನಿಮ್ಮ ಕೆಲಸ ಮಾಡಿಕೊಡಬಹುದು ಎಂದರು.
ನಾನು ವಿರೋಧ ಪಕ್ಷದವನು, ನನ್ನ ಸ್ನೇಹಿತ ಜ್ಯೋತಿ ಆಡಳಿತ ಪಕ್ಷವನು, ನಾನು ಹೋರಾಟ ಮಾಡಬಹುದು, ನನ್ನ ಸ್ನೇಹಿತ ನಿಮ್ಮ ಪರ ಆದೇಶ ಮಾಡಿಸಬಹುದು, ಜ್ಯೋತಿಗಣೇಶ್ ಆ ಕೆಲಸವನ್ನು ಮಾಡಬಹುದು ಎಂದು ಹೇಳಿದರು.
ಆಗಿನ ಕಾಲದಲ್ಲೇ ಶಾಲೆ ಪ್ರಾರಂಭಿಸಿ ಶಿಕ್ಷಣ ನೀಡುವ ಧ್ಯೇಯ ಮಾಡಿದರು, ಅವರಿಗೆ ಅದ್ದೂರಿ ಸನ್ಮಾನ ಮಾಡಬೇಕು, ಅವರಿಗೆ ಸನ್ಮಾನ ಮಾಡುವುದೇ ಪುಣ್ಯ, ಗ್ರಾಮಾಂತರದಲ್ಲಿ ಕಾರ್ಯಕ್ರಮ ಮಾಡಿ, ನೆನಪಿನಲ್ಲಿ ಉಳಿಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾಲೆ ಕಟ್ಟುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು, ಶಿಕ್ಷಣ ಸಂಸ್ಥೆ ನೋಡಿಕೊಳ್ಳಲು ರಾಜಕೀಯದಿಂದ ಆಗುತ್ತಿಲ್ಲ, ಜೆಡಿಎಸ್ ಅಧಿಕಾರಕ್ಕೆ ಬಂದರೆ, ನಮ್ಮದೇ ಶಿಕ್ಷಣ ಸಚಿವರಿದ್ದಾಗ, ಸಂಪೂರ್ಣ ಬೆಂಬಲ ನೀಡುತ್ತೇನೆ, ಜ್ಯೋತಿಗಣೇಶ್ ಅವರು ಸಚಿವರಿಗೆ ಹೇಳಿ, ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸಲಿ, ಅವರು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ, ನಮ್ಮ ತೊಂದರೆ ಬಗ್ಗೆ ಶಿಕ್ಷಣ ಸಚಿವರಿಗೆ ಮಾಹಿತಿ ನೀಡಲಿ ಎಂದರು.
ಆರ್ ಟಿ ಇ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಅನುದಾನದ ಪಾರದರ್ಶಕತೆ ಕಾಪಾಡಬೇಕು, ಶಾಲೆಗಳ ಅನುಮತಿಯನ್ನು ಹತ್ತು ವರ್ಷಗಳಿಗೆ ನೀಡಲು ಸರ್ಕಾರ ಮುಂದಾಗಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ ಹೋರಾಟ ಬೆಂಬಲ ನೀಡುವುದಾಗಿ ಘೋಷಣೆ ನೀಡಿದರು.