ಶಾಸಕ ಗೌರಿಶಂಕರ್ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದು ಖಚಿತ: ಸೂರ್ಯ ಮುಕುಂದರಾಜ್

ಡೆಸ್ಕ್
1 Min Read

 

ತುಮಕೂರು: ಗೌರಿಶಂಕರ್ ಅವರು ಚುನಾವಣಾ ಅಕ್ರಮ ಸಾಬೀತಾಗಿದ್ದು, ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ವಿಮೆ ಬಾಂಡ್ ಹಂಚಿದ್ದಾರೆ ಎಂಬುದು ಸಾಬೀತಾಗಿದೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಶೀಘ್ರ ಅಂತಿಮ ತೀರ್ಪ ಹೊರಬೀಳಲಿದೆ ಎಂದರು.

ಗ್ರಾಮಾಂತರ ಶಾಸಕರ ಬೇನಾಮಿಯಾಗಿರುವ ಪಾಲನೇತ್ರಯ್ಯ ಚುನಾವಣಾ ಅಕ್ರಮ ಒಪ್ಪಿ, ತುಮಕೂರು ನ್ಯಾಯಾಲಯದಲ್ಲಿ ಒಂದು ಸಾವಿರ ದಂಡ ಕಟ್ಟಿದ್ದಾರೆ, ಗೌರಿಶಂಕರ್ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದಿದ್ದಾರೆ, ಪಾಲನೇತ್ರಯ್ಯ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ ನ್ಯಾಯಾಲಯದ ರಜೆ ಮುಗಿದ ನಂತರ ತೀರ್ಪು ಹೊರಬೀಳಲಿದ್ದು, ಗೌರಿಶಂಕರ್ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಖಚಿತ ಎಂದರು.

Share this Article
Verified by MonsterInsights