ತುಮಕೂರು: ವ್ಯಕ್ತಿಯೊಬ್ಬನ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿ ದರೋಡೆ ಮಾಡಲು ಯತ್ನಿಸಿರುವ ಘಟನೆ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.
ತುಮಕೂರಿನ ಅಂತರಸನಹಳ್ಳಿ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪ ರಾತ್ರಿ 10:30ರ ಸುಮಾರಿನಲ್ಲಿ ಮನೆಯಿಂದ ಅಂತರಸನಹಳ್ಳಿ ಕಡೆಗೆ ನಡೆದು ಬರುತ್ತಿದ್ದ ರಮೇಶ್ ಎಂಬುವರನ್ನು ಡಿಯೋ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ, ಬಾಕು, ಲಾಂಗ್ ತೋರಿಸಿ ಬೆದರಿಸಿದ್ದಾರೆ.
ರಮೇಶ್ ಅವರಿಗೆ ಹಣ ಹಾಗೂ ಮೊಬೈಲ್ ನೀಡುವಂತೆ ಧಮ್ಕಿ ಹಾಕಿದ್ದು, ಹಣ, ಮೊಬೈಲ್ ನೀಡದೇ ಇದ್ದರಿಂದ ಕುಪಿತಗೊಂಡ ದುರ್ಷರ್ಮಿಗಳು ಲಾಂಗ್ ಬೀಸಿದ್ದು, ಕೈಯಲ್ಲಿ ಅಡ್ಡ ನೀಡಿದ್ದರಿಂದ ಕೈಯಲ್ಲಿನ ನರಗಳು ಕಟ್ ಆಗಿವೆ ಎಂದು ತಿಳಿದು ಬಂದಿದೆ.
ಗಾಯಗೊಂಡಿರುವ ರಮೇಶ್, ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ತಡ ರಾತ್ರಿಯೇ ಗ್ರಾಮಾಂತರ ಠಾಣೆಗೆ ರಮೇಶ್ ಮಾಹಿತಿ ನೀಡಿದರೂ ಸಹ ಇದುವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.