ಮಾಂಸ ತಿನ್ನೋರಿಗೆ ಬುದ್ದಿ ಬೆಳೆಯಲ್ಲ: ಎಸ್.ಆರ್.ಶ್ರೀನಿವಾಸ್

ಡೆಸ್ಕ್
1 Min Read

ತುಮಕೂರು: ಮಾಂಸ ತಿನ್ನೋರಿಗೆ ಬುದ್ದಿ ಬೆಳೆಯಲ್ಲ ಎನ್ನುವಂತೆ ಒಕ್ಕಲಿಗರಿಗೆ ಬುದ್ದಿ ಇಲ್ಲದಂತಾಗಿದೆ, ವೀರಶೈವರು ಒಂದಾಗಿರಬೇಕಾದ್ರೆ, ಗೌಡರು ಒಂದಾಗೋದಕ್ಕೆ ಏನಾಗಿದೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್  ಪ್ರಶ್ನಿಸಿದರು.

ಒಕ್ಕಲಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು,   ನಮ್ಮ ಸಮುದಾಯದಲ್ಲಿಯೇ ಇರುವ ಮೀರ್ ಸಾಧಿಕರು ನಮ್ಮನ್ನು ಬೇರೆಯವ್ರ ಮನೆ ಬಾಗಿಲಿಗೆ ಕಳುಹಿಸೋದಕ್ಕೆ ದಾರಿತಪ್ಪಿಸುತ್ತಿದ್ದಾರೆ, ಅಂತವರ ಮಾತನ್ನು ಒಕ್ಕಲಿಗ ಸಮುದಾಯ ನಂಬಬಾರದು ಎಂದು ತಿಳಿಸಿದರು.

ಒಕ್ಕಲಿಗರು ನಾವು ನಾವಾಗಿಯೇ ಬದುಕಬೇಕಾ, ಇನ್ನೊಬ್ಬರ ಮನೆ ಬಾಗಿಲಲ್ಲಿ ಕೈಕಟ್ಟಿಕೊಂಡು ಕುರಬೇಕಾ? ಅವ್ನು ಗೆಲ್ಲಿಸುತ್ತಾನೆ, ಇವ್ನು ಗೆಲ್ಲಿಸುತ್ತಾನೆ ಎನ್ನುವುದನ್ನು ಬಿಟ್ಟು ಮುದ್ದಹನುಮೇಗೌಡರನ್ನು ಗೆಲ್ಲಿಸಲು ಸಮುದಾಯ ಒಂದಾಗಿ ಮತ ನೀಡಬೇಕು ಎಂದು ಕರೆ ನೀಡಿದರು.

ವೀರಶೈವರು ಒಂದಾಗಿ ವೋಟ್ ಹಾಕ್ತಾರೆ, ಒಕ್ಕಲಿಗರು ಏಕೆ ಒಂದಾಗಲ್ಲ ಮುದ್ದಹನುಮೇಗೌಡರಿಗೆ ವೋಟ್ ಹಾಕಲ್ಲ, ಅವ್ರು ಒಂದಾಗಿ ವೋಟ್ ಹಾಕ್ಬೇಕಾದ್ರೆ, ಗೌಡರು ಒಂದಾಗೋಕೆ ಆಗಲ್ವ, ನಮ್ಮಲ್ಲೇ ಇರುವ ಮೀರ್ ಸಾಧಿಕ್ ಗಳನ್ನು ಸಮಾಜ ಏಕೆ ಹಾಳ್ ಮಾಡ್ತೀರಾ ಎಂದು ಪ್ರಶ್ನಿಸಿ, ಬುದ್ಧಿಕಲಿಸಿ ಎಂದು ಹೇಳಿದರು.

Share this Article
Verified by MonsterInsights