ಸೋದರ ಮಾವನೊಂದಿಗೆ ಮದುವೆ: ನವವಿವಾಹಿತೆ ಆತ್ಮಹತ್ಯೆ

ಡೆಸ್ಕ್
1 Min Read
Crime

ತುಮಕೂರು: ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಸೋದರ ಮಾವನೊಂದಿಗೆ ಮದುವೆ ಮಾಡಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಣಿಗಲ್ ತಾಲ್ಲೂಕಿನ ಎಡೆಯೂರು ಬಳಿ ನಡೆದಿದೆ.

Crime

ಎಡೆಯೂರು ವ್ಯಾಪ್ತಿಯ ಶಿಡ್ಲನಹಟ್ಟಿ ಗ್ರಾಮದ ರಕ್ಷಿತ (19) ಮೃತ ಯುವತಿ. ಕಳೆದ ಇಪ್ಪತ್ತು ದಿನಗಳ ಹಿಂದಷ್ಟೆ ತಾಯಿಯ ತಮ್ಮ (ಸೋದರ ಮಾವನೊಂದಿಗೆ) ಕುಟುಂಬಸ್ಥರು ಒಪ್ಪಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಯುವತಿಯನ್ನು ಕಾಲೇಜು ಬಿಡಿಸಿದ್ದರು ಎನ್ನಲಾಗಿದೆ. ಆರೋಗ್ಯ ಸಮಸ್ಯೆ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದ ಯುವತಿ ರಕ್ಷಿತ ಕೆರೆಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅಮೃತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share this Article
Verified by MonsterInsights