ಮಂತ್ರಿಯಾಗಲು ಟಿಕೆಟ್ ತಪ್ಪಿಸಿದ ಗ್ರಾಮಾಂತರ ರಾಜಕಾರಣಿ
ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಅವರನ್ನು ಸೋಲಿಸಲು ಕಿರಣ್ ಕುಮಾರ್ ಅವರನ್ನು ಸಂಸದರೇ ಎತ್ತಿ ಕಟ್ಟಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದವರನ್ನು ದೊಡ್ಡವರ ಮಾತು ಕೇಳಿ ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ, ಬೀದಿ ಬರುವಂತಾಗಿದೆ, ಜಿಲ್ಲೆಯಲ್ಲಿ ಬಿಜೆಪಿ ಹಾಳು ಮಾಡಲು ಒಬ್ಬರನ್ನು ಒಬ್ಬರ ಮೇಲೆ ಎತ್ತಿಕಟ್ಟುತ್ತಿದ್ದಾರೆ ಎಂದರು
ಪೇ ಎಂಎಲ್ ಎ ಕಾಂಗ್ರೆಸ್ ನವರು ಪೋಸ್ಟರ್ ಅಂಟಿಸಿದ್ದರು, ನೂರಾರು ಕೋಟಿ ಲೂಟಿಯಾಗಿದೆ, ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ಎನ್ನುವ ಪರಿಸ್ಥಿತಿ ನಗರದಲ್ಲಿದೆ, ಮರಳೂರು ದಿಣ್ಣೆಯಲ್ಲಿ ಸರ್ಕಾರದ ಯೋಜನೆ ಅಕ್ರಮವಾಗಿರುವ ಬಗ್ಗೆ ಇನ್ನು ಪ್ರಕರಣ ನಡೆಯುತ್ತಿದೆ ಎಂದರು.
ಬಿಜೆಪಿಗೆ ಬಂದವರು ಇಂದು ಪಕ್ಷದಲ್ಲಿದ್ದವರನ್ನು ಹೊರಗೆ ಹಾಕಿದ್ದಾರೆ, ದೇವಾಲಯದೊಳಗೆ ಕುರಿತು ವ್ಯವಹಾರ ಮಾಡುತ್ತಿದ್ದಾರೆ, ಹೋರಾಟ ಮಾಡುವುದಕ್ಕೆ ಹುಟ್ಟಿದ್ದೇನೆ, ಚುನಾವಣೆಗೆ ಸ್ಪರ್ಧಿಸುತ್ತೆನೆ, ಪಕ್ಷೇತರವಾಗಿ ಸ್ಪರ್ಧಿಸುವುದೋ ಅಂತಹ ಪಕ್ಷ ಸೇರ್ಪಡೆಯಾಗುವುದೋ ಎನ್ನುವುದನ್ನು ಹಿತೈಶಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಗ್ರಾಮಾಂತರದ ರಾಜಕಾರಣಿ ಸೊಗಡು ಶಿವಣ್ಣರಿಗೆ ಟಿಕೆಟ್ ನೀಡಿದರೆ ನನಗೆ ಮಂತ್ರಿಗಿರಿ ಹೋಗುತ್ತದೆ ಎಂದು ಜಿಲ್ಲಾಧ್ಯಕ್ಷ, ಸಂಸದ, ಶಾಸಕ, ಮಾಜಿ ಶಾಸಕರು ಸೇರಿಕೊಂಡು ನನ್ನ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ಜಯಸಿಂಹರಾವ್, ಪುಟ್ಟಸ್ವಾಮಿ, ಧನಿಯಾಕುಮಾರ್, ಶಾಂತರಾಜು, ಚೌಡೇಶ್, ಶಬ್ಬೀರ್ ಅಹಮದ್, ನರಸಿಂಹಯ್ಯ, ರಾಜ್ ಕುಮಾರ್ ಗುಪ್ತ, ಹರೀಶ್, ವೀರಭದ್ರ, ಟಿ.ವಿ.ಮಂಜುನಾಥ್, ಪ್ರಕಾಶ್ ಇತರರಿದ್ದರು