ತುಮಕೂರು: ಸಾವಿರಾರು ಕೋಟಿ ಲೂಟಿ ಹೊಡೆದಿರುವ ರಾಜಕಾರಣಿಗಳಿಗೆ ಸಮುದಾಯ ಬುದ್ಧಿ ಕಲಿಸಲು ಮುಂದಾಗಿದೆ ಎಂದು ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಭವಿಷ್ಯಕ್ಕಾಗಿ ಪ್ರಾಮಾಣಿಕರಿಗೆ, ಹೊಸಬರಿಗೆ ಎಲ್ಲ ಪಕ್ಷಗಳು ಅವಕಾಶ ನೀಡಬೇಕು, ದೇಶವನ್ನು ಗಮನದಲ್ಲಿಟ್ಟುಕೊಳ್ಳದವರಿಗೆ ಬುದ್ಧಿಕಲಿಸಬೇಕು ಎಂದರು.
ನೊಳಂಬ ಸಮುದಾಯ ದೇಶವನ್ನು ಆಳಿದ ಸಮುದಾಯ ನಲ್ವತ್ತು ವರ್ಷಗಳಿಂದ ಪ್ರಾತಿನಿಧ್ಯ ಸಿಕ್ಕಿದೆ, ಸಮುದಾಯದಲ್ಲಿರುವ ಸಮರ್ಥ ವ್ಯಕ್ತಿಗಳಿಗೆ ಪಕ್ಷ ಅವಕಾಶ ಕಲ್ಪಿಸಬೇಕಿದೆ ಎಂದರು.
ತುರುವೇಕೆರೆಯ ಮತ್ಯುಂಜಯ ಸ್ವಾಮೀಜಿ ಮಾತನಾಡಿ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚಿರುವ ನೊಳಂಬ ಸಮುದಾಯಕ್ಕೆ ರಾಷ್ಟ್ರೀಯ ಪಕ್ಷಗಳಿಗೆ ಲೋಕಸಭಾ ಟಿಕೆಟ್ ನೀಡಬೇಕು, ಪ್ರಬಲವಾಗಿರುವ ಸಮುದಾಯಕ್ಕೆ ಅವಕಾಶ ನೀಡಬೇಕೆಂದರು.
ಕಾಂಗ್ರೆಸ್ ಪಕ್ಷದಲ್ಲಿ ಲೋಕೇಶ್ವರ್, ಷಡಕ್ಷರಿ, ಪ್ರಸನ್ನಕುಮಾರ್ ಬಿಜೆಪಿಯಲ್ಲಿ ಹೆಚ್.ಎನ್.ಚಂದ್ರಶೇಖರ್, ಮಾಧುಸ್ವಾಮಿ, ಹೆಬ್ಬಾಕ ರವಿ, ದಿಲೀಪ್ ಕುಮಾರ್ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿನವ ದೇಶಿಕೇಂದ್ರ ಸ್ವಾಮೀಜಿ, ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ಗುರುಸಿದ್ದರಾಮೇಶ್ವರ ಜಯಂತಿ ಸಮಿತಿ ಅಧ್ಯಕ್ಷ ಮಧುಸೂಧನ್ ಇತರರಿದ್ದರು.