ಛಲವಾದಿ ನಾರಾಯಣಸ್ವಾಮಿ ಸ್ನಾನ ಮಾಡ್ಕೊಂಡು ಬರಲಿ

ಡೆಸ್ಕ್
1 Min Read

ತುಮಕೂರು: ವೈಯಕ್ತಿಕ ಲಾಭಕ್ಕಾಗಿ ಆರ್‌ಎಸ್‌ಎಸ್ ಚೆಡ್ಡಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಗ್ರಾಮಾಂತರದಲ್ಲಿ ನಡೆಯಲಿರುವ ಛಲವಾದಿ ಸಮಾವೇಶಕ್ಕೆ ಸ್ನಾನ ಮಾಡಿ ಸೆಂಟ್ ಹಾಕಿಕೊಂಡು ಬರಬೇಕೆಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರು ಮಾತನಾಡಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಅವರು ದಲಿತ ಮುಖಂಡರು ಜೊತೆಯಲ್ಲಿ ಬರುವಾಗ ಶುಭ್ರವಾಗಿ ಬರಬೇಕೆಂದು ಬಯಸುತ್ತಾರೆ, ತಮ್ಮ ಹಿಂಬಾಲಕರಿಗೆ ಎಡಗೈ ಸಮುದಾಯದ ಜನರು 15 ದಿನ ಆದರೂ ಸ್ನಾನ ಮಾಡುವುದಿಲ್ಲ ಎಂದು ಬೈದಿರುವುದು ಜಗಜ್ಜಾಹೀರಾಗಿದೆ.

ಇಂತಹ ದಲಿತ ವಿರೋಧಿ ಮಾಜಿ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಛಲವಾದಿ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಛಲವಾದಿ ನಾರಾಯಣ ಸ್ವಾಮಿಯವರಿಗೆ ನಾವು ಜಿಲ್ಲೆಯ ಛಲವಾದಿ ಜನಾಂಗ ಶಿಕ್ಷಣ ಪಡೆದು ಸಾಮಾನ್ಯ ಜ್ಞಾನ ಉಳ್ಳವರಾಗಿದಾರೆ ಆದುದರಿಂದ ಛಲವಾದಿ ನಾರಾಯಣ ಸ್ವಾಮಿಯವರಿಗೆ ಸ್ನಾನ ಮಾಡಿ ಸೆಂಟ್ ಹಾಕಿಕೊಂಡು ಬರಬೇಕು ಎಂದು ಮನವಿ ಮಾಡಿದರು.

ಅಂಬೇಡ್ಕರ್ ಅವರು ನಾಗಪುರದ ಆರ್.ಎಸ್.ಎಸ್.ಕಛೇರಿಗೆ ಭೇಟಿಕೊಟ್ಟು ಮನು ಸಂವಿಧಾನನ ಸುಟ್ಟು ಹಾಕಿ ಶೋಷಣೆ ಜಾತಿ ವ್ಯವಸ್ಥೆಗೆ ನಾಂದಿ ಹಾಡಿದವರು ಆದರೆ ನೀವು ನಿಮ್ಮ ಸ್ವಂತ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತು ಆರೆಸ್ಸೆಸ್ ನವರ ಚಡ್ಡಿ ಹೊರುವ ಮೂಲಕ ನೀವು ಮನುಸ್ಪೃತಿಯು ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿ ಸಿದರು.

ದಲಿತ ಸಮುದಾಯದ ಎಡ-ಬಲ ಸಮುದಾಯಗಳು ಅಣ್ಣತಮ್ಮಂದಿರಂತೆ ಇದ್ದು, ಯಾವುದೇ ಸಮುದಾಯವನ್ನು ಅವಮಾನಿಸಿ ದರು ಸಹ ಅದು ಅಸ್ಪೃಶ್ಯ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಛಲವಾದಿ ನಾರಾಯಣಸ್ವಾಮಿ ಅವರು ಈ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆ ಇದೆ, ಪಕ್ಷದಲ್ಲಿದ್ದ ಮಾತ್ರಕ್ಕೆ ಸಮುದಾಯವನ್ನು ಅವಮಾನಿಸಿದವರನ್ನು ಬೆಂಬಲಿಸುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ಈ ವೇಳೆ ಶಿವರಾಜ್, ಸಿದ್ಧಲಿಂಗಯ್ಯ, ನರಸಿಂಹರಾಜು, ಗಿರಿಸ್ವಾಮಿ, ರಾಜಣ್ಣ,ನಾರಾಯಣ್, ಗೋವಿಂದರಾಜು, ನರಸೀಯಪ್ಪ ಸೇರಿದಂತೆ ಇತರರಿದ್ದರು.

Share this Article
Verified by MonsterInsights