ನಿಖಿಲ್ ಕುಮಾರಸ್ವಾಮಿ ಮೇಲೆ ಮುಗಿಬಿದ್ದ ಕಾರ್ಯಕರ್ತರು

ಡೆಸ್ಕ್
1 Min Read

ಗೊಂದಲದ ಗೂಡಾದ ಜೆಡಿಎಸ್ ಕಾರ್ಯಕ್ರಮ

ತುಮಕೂರು: ನಗರದ ಜೆಡಿಎಸ್ ಕಚೇರಿ ಆವರಣದಲ್ಲೊ ನಡೆದ ತುಮಕೂರು ನಗರಾಧ್ಯಕ್ಷರ ಪದಗ್ರಹಣ ಹಾಗೂ ನಗರ ವಿಧಾನಸಭಾ ಕ್ಷೇತ್ರದ ಜನ ಸಮ್ಮಿಲನ ಕಾರ್ಯಕ್ರಮ ಕಾರ್ಯಕರ್ತರಿಗೆ ಸೀಮಿತವಾಯಿತು.

ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ನಿರ್ವಹಿಸಲು ಆಯೋಜಕರು ಪರದಾಟ ಮಾಡುವಂತಾಯಿತು, ಮೂರು ಗಂಟೆ ತಡವಾಗಿ ಶುರುವಾದ ಕಾರ್ಯಕ್ರಮದ ವೇದಿಕೆ ಮೇಲೆ ಕಾರ್ಯಕರ್ತರು ಜಮಾಯಿಸಿದ್ದರಿಂದ, ಕೆಲ ಕಾಲ ವೇದಿಕೆ ಕುಸಿಯುವಂತಹ ಸ್ಥಿತಿ ನಿರ್ಮಾಣವಾಯಿತು.

ರಕ್ಷಣಾ ದೃಷ್ಟಿಯಿಂದ ಪೊಲೀಸರು ವೇದಿಕೆಯಿಂದ ಕೆಳಗೆ ಇಳಿಯಲು ಕಾರ್ಯಕರ್ತರಿಗೆ ಸೂಚನೆ ನೀಡಿದರು ಸಹ ಯಾವುದೇ ಪ್ರಯೋಜನವಾಗದೇ ಕೊನೆಗೆ ನಿಖಿಲ್ ಕುಮಾರಸ್ವಾಮಿ ಅವರೇ ಕಾರ್ಯಕರ್ತರಲ್ಲಿ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ.

ಅಭ್ಯರ್ಥಿಯನ್ನೇ ಆಚೆ ಹಾಕಿದ ಕಾರ್ಯಕರ್ತರು: ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಎನ್.ಗೋವಿಂದರಾಜು ಅವರನ್ನು ನಿಖಿಲ್ ಕುಮಾರಸ್ವಾಮಿಗೆ ಹೂವಿನ ಹಾರಹಾಕುವ ಭರದಲ್ಲಿ ವೇದಿಕೆಯ ಪಕ್ಕಕ್ಕೆ ತಳ್ಳಿದರು, ಜನ ಸಮ್ಮೀಲನಕ್ಕೆ ಬಂದವರನ್ನೇ ವೇದಿಕೆ ಪಕ್ಕಕ್ಕೆ ತಳ್ಳಿದ್ದು ನಗೆ ಪಾಟಲಿಗೆ ಕಾರಣವಾಯಿತು.

ಲೋ ಒಂದ್ನಿಮಿಷ ಬೀಡ್ರೋ: ನಗರದ ಅಭ್ಯರ್ಥಿ ಗೋವಿಂದರಾಜು ಭಾಷಣದ ಬಗ್ಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರಿಗೆ ಸನ್ಮಾನ ಮಾಡಲು ಮುಂದಾಗಿದ್ದರಿಂದ ಒಂದ್ನಿಮಿಷ ಬಿಡ್ರೋ,, ಪಕ್ಕಕ್ಕೆ ಬರ್ನೋ ಅಂತ ಗೊಣಗಾಡಿದರು.

ಇನ್ನು ಕಾರ್ಯಕ್ರಮ ಮುಗಿದ ನಂತರ ನಿಖಿಲ್ ಕುಮಾರಸ್ವಾಮಿ ವೇದಿಕೆಯಿಂದ ಕೆಳಗಿಳಿಯಲು ಪರದಾಡುವಂತಾಯಿತು, ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯ್ ಗೌಡ್ರು ನಿಖಿಲ್ ಮೇಲೆ ಮುಗಿ ಬೀಳುತ್ತಿದ್ದ ಕಾರ್ಯಕರ್ತರನ್ನು ಎಳೆದೆಳೆದು ಬಿಡುವ ಮೂಲಕ ನಿಖಿಲ್ ರಕ್ಷಣೆಗೆ ನಿಂತರು.

Share this Article
Verified by MonsterInsights