ಸುರೇಶಗೌಡ್ರು ಜನರಿಗಾಗಿ ಜಗಳ ಮಾಡ್ತಾರೆ: ಶೋಭಾ ಕರಂದ್ಲಾಜೆ

ಡೆಸ್ಕ್
1 Min Read

ತುಮಕೂರು: ಗ್ರಾಮಾಂತರ ಕ್ಷೇತ್ರಕ್ಕೆ ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಅನ್ನು ನಾನು ಸಚಿವೆಯಾಗಿದ್ದಾಗ ನೀಡಿದ್ದೆ. ಸುರೇಶಗೌಡರು ಜಗಳ ಮಾಡಿ ಯೋಜನೆಯನ್ನು ಇಲ್ಲಿಗೆ ತಂದರು. ಅವರು ಬೇರೆಯವರ ಥರ ಅಲ್ಲ. ಜನರಿಗೆ ಕೊಡಬೇಕು ಎಂಬುದನ್ನು ಜಗಳ ಮಾಡಿ ತರುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಾಗವಲ್ಲಿ ಸಮೀಪದ ಶಕ್ತಿ ಸೌಧದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಗೆದ್ದರೆ ಅಂತರಾಷ್ಟ್ರೀಯ ಕೃಷಿ ರಫ್ತೋದ್ಯಮ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಇಲ್ಲಿನ ಅಧಿಕಾರಿಗಳಿಗೆ, ರೈತರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು‌. ಪ್ರತಿ ಕುಟುಂಬವು ರಫ್ತು ಉದ್ಯಮ ಆರಂಭಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಹಣ್ಣು, ತರಕಾರಿ, ಹೂವಿನ ಬೆಳೆಗಳನ್ನು ಸಮೀಪದ ಮಾರುಕಟ್ಟೆ ಗೆ ಹಾಕುವುದರಿಂದ ರೈತರಿಗೆ ಹೆಚ್ಚು ಲಾಭ ಸಿಗುವುದಿಲ್ಲ. ರಫ್ತು ಮಾಡಿದರೆ ಕೈ ತುಂಬಾ ಹಣ ಗಳಿಸಬಹುದು ಎಂದರು.

ತೆಂಗು ಉದ್ಯಮಕ್ಕೂ ನೆರವಾಗಬೇಕು. ತೆಂಗು, ಕೊಬ್ಬರಿ ರಫ್ತು ಕೇಂದ್ರವನ್ನೂ ಸ್ಥಾಪಿಸಬೇಕು ಎಂದು ಸುರೇಶಗೌಡರು ಮನವಿ ಮಾಡಿದರು.
Share this Article
Verified by MonsterInsights