ಮೋದಿ ಎದುರು ಬಂದ್ರೇ ಉಚ್ಚೇ ಹುಯ್ಕೊಂತ್ತಾರೆ: ಶ್ರೀನಿವಾಸ್

ಡೆಸ್ಕ್
1 Min Read

ತುಮಕೂರು: ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳ್ಸೀದ್ಸೀರಿ ಒಬ್ಬರಾದರೂ ಸಂಸತ್ತೀನಲ್ಲಿ ಮಾತನಾಡುತ್ತಾರಾ? ಮೋದಿ ಎದುರು ಬಂದ್ರೆ ಉಚ್ಚೇ ಹುಯ್ಕೋಂತ್ತಾರೆ ಎಂದು ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಬಸವರಾಜು ಗೆಲ್ಲಿಸಿದ್ದೀರಾ ಸಂಸತ್ತಿನಲ್ಲಿ ಒಂದೇ ಒಂದು ಮಾತನಾಡಿಲ್ಲ, ಸಂಸತ್ತಿನಲ್ಲಿ ಅವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ ಎಂದರು.

ರಾಜ್ಯದ ಪರವಾಗಿ ಮಾತನಾಡದ ನಪುಂಸಕರನ್ನು ಗೆಲ್ಲಿಸುವುದರಿಂದ ಏನು ಉಪಯೋಗ, ಬಸವರಾಜು ಜಿಲ್ಲೆಯ ಸಮಸ್ಯೆ ಬಗ್ಗೆ ಮಾತನಾಡಿರುವುದು ತೋರಿಸಿದರೆ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ, ಸೋಮಣ್ಣನ ಮನೆ ಬಾಗಿಲಿಗೆ ಹೋಗಲು 400 ಖರ್ಚು ಮಾಡ್ಬೇಕು ಹರಿಯುವ ನೀರಿನ ಹಿಂದೆ ಹೋಗದೇ ನಿಂತ ನೀರಾಗಿರುವ ಮುದ್ದಹನುಮೇಗೌಡರಿಗೆ ಮತ ನೀಡಿ ಎಂದರು.

ಸಿದ್ಧಗಂಗಾ ಮಠಕ್ಕೆ ಬಂದು ಸ್ವಾಮೀಜಿ ಕಾಲಿಗೆ ಬಿದ್ದಿರುವುದನ್ನು ಬಿಟ್ಟರೆ ಜಿಲ್ಲೆಗೂ ಸೋಮಣ್ಣನಿಗೂ ಯಾವುದೇ ಸಂಬಂಧವಿಲ್ಲ, ಈ ಚುನಾವಣೆ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ, ಹೊರಗಿನಿಂದ ಬಂದು ಸ್ಪರ್ಧಿಸಿರುವ ಸೋಮಣ್ಣನವರಿಗೆ ಯಾವುದೇ ಕಾರಣಕ್ಕೂ ಮತ ನೀಡಬಾರದು ಎಂದು ಕರೆ ನೀಡಿದರು.

ಸಭೆಯಲ್ಲಿ ಸಚಿವ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಎಸ್.ಪಿ.ಮುದ್ದಹನುಮೇಗೌಡ, ಶಫೀ ಅಹಮದ್, ಇಕ್ಬಾಲ್ ಅಹಮದ್, ರಫೀಕ್ ಅಹಮದ್ ಸೇರಿದಂತೆ ಇತರರಿದ್ದರು.

Share this Article
Verified by MonsterInsights