ಕುಮಾರಸ್ವಾಮಿಗೆ ಯಾವ ರೀತಿ ಮಂತ್ರಿ ಸ್ಥಾನ ಕೊಟ್ಟಿದ್ದಾರೋ: ಶಾಸಕ ಎಸ್.ಆರ್.ಶ್ರೀನಿವಾಸ್

ಡೆಸ್ಕ್
1 Min Read

ಗುಬ್ಬಿ: ಹೆಚ್.ಡಿ.ಕುಮಾರಸ್ವಾಮಿ ಯಾವತ್ತು ನಿಜ ಹೇಳಿದ್ದಾರೆ, ಅವರು ಹೇಳುವುದೆಲ್ಲಾ ಬರೀ ಸುಳ್ಳೇ ಎಂದು ಕೆಎಸ್ಆರ್ ಟಿಸಿ ನಿಗಮದ ಅಧ್ಯಕ್ಷ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.

ತಾಲ್ಲೂಕಿನ ಇಸ್ಲಾಂ ನಗರದಲ್ಲಿ 10 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ಮಾಡಿ ಮಾತನಾಡಿದ ಅವರು ಡಾ.ಜಿ.ಪರಮೇಶ್ವರ್ ಮೇಲೆ ಇಡಿ ದಾಳಿಗೆ ಡಿ.ಕೆ.ಶಿವಕುಮಾರ್ ಕಾರಣ ಅಂದೇಳಿದ್ದಾರೆ, ಡಿಕೆಶಿ ಹೇಳಿದ ತಕ್ಷಣಕ್ಕೆ ಇಡಿ ರೈಡ್ ಆಗುತ್ತಾ ಇವರಿಗೆಲ್ಲಾ ಯಾವರೀತಿ ಮಂತ್ರಿ ಸ್ಥಾನ ಕೊಟ್ಟಿದ್ದಾರೋ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರು ಪಕ್ಷವನ್ನು ಕಟ್ಟಿ ಬೆಳೆಸಿದಂತಹವರು ಮುಖ್ಯಮಂತ್ರಿ ಆಗುವುದಕ್ಕೆ ಅವರಿಗೂ ಸಹ ಅರ್ಹತೆ ಇದೆ ಅವರು ಕೇಳುವುದರಲ್ಲಿ ಯಾವುದೇ ತಪ್ಪು ಇಲ್ಲ ಅದನ್ನು ನಮ್ಮ ಪಕ್ಷದ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

ಲಿಂಕ್ ಕೆನಾಲ್ ಗೆ ವಿರೋಧ

ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ನನ್ನ ವಿರೋಧ ಇದೆ. ಡಿಕೆ ಶಿವಕುಮಾರ್ ಜೊತೆಯಲ್ಲಿ ಮಾತನಾಡುತ್ತೇನೆ . ನಾನು ಸಹ ಸರಕಾರದ ಒಂದು ಭಾಗವಾಗಿರುವುದರಿಂದ ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ ಜಿಲ್ಲೆಯಲ್ಲಿರುವ ಸಚಿವರುಗಳು ಸಹ ಇದರ ಬಗ್ಗೆ ಮಾಹಿತಿ ನೀಡಿ ಮನದಟ್ಟು ಮಾಡುವ ಕೆಲಸವನ್ನು ಮಾಡುತ್ತೇವೆ ಎಂದರು.

ಬಿಜೆಪಿಯವರು ಜಾತಿ, ಧರ್ಮ ಇಟ್ಟುಕೊಂಡು ರಾಜಕೀಯವನ್ನು ಮಾಡುವ ಮೂಲಕ ಇಡೀ ಸಮಾಜವನ್ನೇ ಹಾಳು ಮಾಡುತ್ತಿದ್ದಾರೆ ಆರ್ ಎಸ್ ಎಸ್ ಬರಿ ಸುಳ್ಳನ್ನೇ ಹೇಳುತ್ತದೆ, ನೂರು ಸುಳ್ಳನ್ನ ಒಂದು ಸತ್ಯ ಮಾಡುವುದರಲ್ಲಿ ನಿಸ್ಸೀಮರು ಎಂದು ದೂರಿದರು.

ದಲಿತರಿಗೆ ಹಾಗೂ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಸಮಾಜದಲ್ಲಿ ಎಲ್ಲರೂ ಸಹ ಬೆಳೆಯಬೇಕು ಅವರಲ್ಲೂ ಸಹ ವಿದ್ಯಾವಂತರಿದ್ದು ಸರ್ಕಾರ ಅಂಥವರ ಅಭಿವೃದ್ಧಿಗೆ ಬೆಳವಣಿಗೆಗೆ ಸಹಕಾರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಪಟೇಲ್ ದೇವರಾಜು, ಲಿಂಗಮ್ಮನಹಳ್ಳಿ ರಾಜಣ್ಣ, ಶಂಕರ ನಂದ,ಚೇತನ್ ಕುಮಾರ್, ಲಕ್ಷ್ಮಿ ನಾರಾಯಣ, ರಾಜುಸಾಬ್, ರೆಹಮತ್,ಗುರು ಚನ್ನಬಸವಣ್ಣ, ಶಂಕರ್ ಕಡಬ, ರಂಗಸ್ವಾಮಿ, ಫಿರ್ದೋಸ್, ಇನ್ನು ಹಲವು ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.

Share this Article
Verified by MonsterInsights