ಗುಜರಾತ್ ಗೆ ಗೃಹಸಚಿವ ಆರಗ ಜ್ಞಾನೇಂದ್ರ

ಡೆಸ್ಕ್
1 Min Read

ಬೆಂಗಳೂರು:ರಾಜ್ಯದಲ್ಲಿ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ, ಮಹತ್ವದ ಸಭೆ ಯಲ್ಲಿ ಪಾಲ್ಗೊಳ್ಳಲು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ನಾಳೆ ಗುಜರಾತ್ ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ.

ಗುಜರಾತ್ ನ, ಅಹಮದಾಬಾದ್ ನಗರಕ್ಕೆ ಭೇಟಿ ನೀಡಲಿರುವ ಗೃಹ ಸಚಿವರು, ಅಲ್ಲಿನ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಉಪ ಕುಲಪತಿ ಹಾಗೂ ಇತರೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.

ತಮ್ಮ ಮೂರು ದಿನಗಳ ಭೇಟಿಯಲ್ಲಿ, ಸಚಿವರು, ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪನೆ ಕುರಿತು, ಎಂ ಓ ಯು ಗೆ, ಸಹಿ ಹಾಕುವ ಸಾಧ್ಯತೆ ಇದೆ.

ಇಡೀ ದಕ್ಷಿಣ ಭಾರತದ ಲ್ಲಿಯೇ ಪ್ರಥಮ ವೆನ್ನಾಲದ, ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ, ಕರ್ನಾಟಕದಲ್ಲಿ ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

ನಾಳೆಯಿಂದ ಮೂರು ದಿನಗಳ ತಮ್ಮ ಭೇಟಿಯ ಕಾಲದಲ್ಲಿ, ಸಚಿವರು, ಗುಜರಾತ್ ನ, ಮುಖ್ಯಮಂತ್ರಿ ಶ್ರೀ ಭೂಪೆಂದ್ರ ಭಾಯ್ ಪಾಟೀಲ್ ಅವರನ್ನೂ, ಸೌಜನ್ಯ ಭೇಟಿ ಮಾಡಲಿದ್ದು, ಗುರುವಾರ , ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ

TAGGED:
Share this Article
Verified by MonsterInsights